ಕನ್ನಡ ವಾರ್ತೆಗಳು

ಜೆಎನ್‌ಯುನಲ್ಲಿ ದೇಶದ್ರೋಹಿಗಳನ್ನು ಬೆಂಬಲಿಸುವ ಓಟ್ ಬ್ಯಾಂಕ್ ರಾಜಕಾರಣ : ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ವಾಗ್ಧಾಳಿ

Pinterest LinkedIn Tumblr

Sanganiketana_naidu_1

ಮಂಗಳೂರು,ಫೆ.14:ಅಫ್ಜಲ್ ಗುರುವನ್ನು ಬೆಂಬಲಿಸುವವರಿಂದ ದೇಶದ ಸಮಗ್ರತೆ ,ಏಕತೆಗೆ ಸವಾಲು ಎದುರಾಗಿದೆ . ಈ ರೀತಿಯ ರಾಷ್ಟ್ರೀಯ ವಿರೋಧಿ ನಿಲುವನ್ನು ಸಹಿಸಲು ಸಾಧ್ಯವಿಲ್ಲ .ಜೆಎನ್‌ಯುನಲ್ಲಿ ದೇಶದ್ರೋಹಿಗಳನ್ನು ಬೆಂಬಲಿಸುವ ಓಟ್ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ. ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಜೆಎನ್‌ಯುನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಪಕ್ಷಗಳ ಮುಖಂಡರ ವಿರುದ್ಧ ವಾಗ್ಧಾಳಿ ನಡೆಸಿದರು.

ಅವರು ನಗರದ ಸಂಘ ನಿಕೇತನದಲ್ಲಿ ಸಿಟಿಜನ್ ಕೌನ್ಸಿಲ್ ಹಾಗೂ ಕೆನರಾ ಚೇಂಬರ್ ವತಿಯಿಂದ ನಗರಗಳ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಜೆಎನ್‌ಯುನಲ್ಲಿ ದೇಶದ್ರೋಹಿಗಳನ್ನು ಬೆಂಬಲಿಸುವುದು,ಪಾಕಿಸ್ತಾನದ ಭಯೋತ್ಪಾದಕರ ನ್ನು ಬೆಂಬಲಿಸಿದ ಅಫ್ಜಲ್ ಗುರು ಪ್ರಕರಣದಲ್ಲಿ ಅನ್ಯಾಯವಾಗಿದೆ ಎನ್ನುತ್ತಿರುವವರು ಕೀಳು ಮಟ್ಟದ ರಾಜಕಾರಣದಲ್ಲಿ ತೊಡಗಿದ್ದಾರೆ. ಪ್ರಧಾನ ಮಂತ್ರಿ ಮೋದಿ ದೇಶಕ್ಕೆ ಉತ್ತಮ ಆಡಳಿತ ನೀಡಬೇಕು,ಅಭಿವೃದ್ಧಿ ಮಾಡಬೇಕು ಎಂದು ಹೊರಟಿದ್ದರೂ ಸಂಸತ್‌ನಲ್ಲಿ ಅಧಿವೇಶವನ್ನು ನಡೆಸಲು ಪ್ರತಿಪಕ್ಷಗಳು ಅಡ್ಡಿಪಡಿಸುತ್ತಿವೆ.

Sanganiketana_naidu_2 Sanganiketana_naidu_3

ಸರಕಾರ ಅಭಿವೃದ್ಧಿಗಾಗಿ ಹಮ್ಮಿಕೊಂಡ ಭೂಮಸೂದೆ ಕಾಯಿದೆ ತಿದ್ದುಪಡಿ ಮಸೂದೆ ಸೇರಿದಂತೆ ಇತರ ಹಲವು ಮಸೂದೆಗಳನ್ನು ಜಾರಿಯಾಗಲೂ ಅಡ್ಡಿಪಡಿಸುತ್ತಿವೆ.ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದಾಗ 20ಲಕ್ಷ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡವರು,ನಾವು ಒಂದು ಎಕರೆ ಭೂಮಿಯನ್ನು ಸ್ವಾಧೀನ ಮಾಡಿ ಕೊಳ್ಳಬಾರದು ಎನ್ನುವ ರೀತಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಈ ರೀತಿಯಾದರೆ ಅಭಿವೃದ್ಧಿ ಆಗುವುದಾದರೂ ಹೇಗೆ ?,ಮೋದಿಯನ್ನು ನಿಯಂತ್ರಿಸಲು ಹೋಗುವುದರೊಂದಿಗೆ ದೇಶದ ಅಭಿವೃದ್ಧಿಗೆ ಅವರು ಅಡ್ಡಿಪಡಿಸುತ್ತಿದ್ದಾರೆ ಎಂದು ವೆಂಕಯ್ಯ ನಾಯ್ಡು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಚಂದಲ್ಲಿಯೇ ಭಾರತ ದೇಶದಷ್ಟು ಸಹಿಷ್ಣತೆಯ ದೇಶ ಇನ್ನೊಂದಿಲ್ಲ.ಆದರೆ ಇಲ್ಲಿ ಕೆಲವರು ದೇಶದಲ್ಲಿ ಅಸಹಿಷ್ಣತೆ ಇದೆ ಎಂದು ರಾಜಕೀಯ ಮಾಡುತ್ತಿದ್ದಾರೆ.ಕೆಲವರು ಪ್ರಶಸ್ತಿ ಹಿಂದಿರುಗಿಸುವ ಮೂಲಕ ನಾಟಕವಾಡುತ್ತಿದ್ದಾರೆ.ಸಂಸತ್‌ನ ಕಲಾಪ ನಡೆಸಲು ಅಡ್ಡಿಪಡಿಸುತ್ತಿದ್ದಾರೆ.ಪ್ರಜಾಪ್ರಭುತ್ವದಲ್ಲಿ ಈ ರೀತಿ ನಡೆಯುತ್ತಿರುವುದು ಒಂದು ವ್ಯಂಗ್ಯ ಎಂದು ವೆಂಕಯ್ಯ ನಾಯ್ಡ ಟೀಕಿಸಿದರು.

ದೇಶದ ಅಭಿವೃದ್ಧಿಯಲ್ಲಿ ಎಲ್ಲರೂ ಕೈ ಜೋಡಿಸಬೇಕಾಗಿದೆ.ದೇಶದಲ್ಲಿ ಸ್ಮಾರ್ಟ್ ಸಿಟಿ ಆಯ್ಕೆಯಲ್ಲಿ ರಾಜಕೀಯ ಮಾಡಿದ್ದಾರೆ ಎನ್ನುವ ಆರೋಪ ಸರಿಯಲ್ಲ,ಪ್ರಥಮ ಹಂತದಲ್ಲಿ ದೇಶದ 20 ನಗರಗಳನ್ನು ಆಯ್ಕೆ ಮಾಡಲಾಗಿದೆ.ದೇಶದ 23ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರಥಮ ಹಂತದಲ್ಲಿ ಸೇರ್ಪಡೆಯಾಗಿಲ್ಲ.

ಮುಂದಿನ ಹಂತದಲ್ಲಿ 40 ನಗರಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರ್ಪಡೆಯಾಗಲಿದೆ.ಈ ಯೋಜನೆಯಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರ ಹಾಗೂ ಖಾಸಗಿ ಸಂಸ್ಥೆಗಳ ಸಹಕಾರವೂ ಬೇಕಾಗಿದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದರು.

ಸಮಾರಂಭದಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ರಮಾನಂದ ಪೈ ಮಾರೂರು,ಮಂಗಳೂರು ಸಿಟಿಜನ್ ಕೌನ್ಸಿಲ್ ಅಧ್ಯಕ್ಷ ಸುನಿಲ್ ಆಚಾರ್ ಹಾಗೂ ಉದ್ಯಮಿಗಳಾದ ಅನಂತ್,ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

Write A Comment