ಮಂಗಳೂರು,ಫೆ.13 :ನಗರದ ಪ್ರತ್ಠಿತ ಕರಾವಳಿ ಕಾಲೇಜುಗಳ ಸಮೂಹದ ಅಶ್ರಯದಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟವು ಶನಿವಾರ ನಗರದ ಮಂಗಳ ಕ್ರೀಡಾಂಗಣದಲ್ಲಿ ಜರಗಿತು.
ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್ ಎಜುಕೇಶನ್ ಟ್ರಸ್ಟ್‌ನ ಸ್ಥಾಪಕಾಧಕ್ಷ ಎಸ್. ಗಣೇಶ್ ರಾವ್ ಅವರು ಕ್ರೀಡಾಕೂಟದ ಉದ್ಫಾಟನೆಯನ್ನು ನೆರವೇರಿಸಿದರು.
ಕರಾವಳಿ ಸಮೂಹ ಕಾಲೇಜಿನ ನಿರ್ದೇಶಕಿ ಲತಾ ಜಿ. ರಾವ್ ಮುಖ್ಯ ಅತಿಥಿಯಾಗಿದ್ದರು. ಕರಾವಳಿ ಕಾಲೇಜಿನ ವಿವಿಧ ವಿಭಾಗಗಳ ಪ್ರಾಂಶುಪಾಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧೀರಾ ಸ್ವಾಗತಿಸಿದರು.ಪ್ಲೇವಿನ್ ಅಲೇಕ್ಸ್ ವಂದಿಸಿದರು. ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಕೂಟದಲ್ಲಿ 100 ಮಿ, 200ಮಿ., 400ಮಿ ಹಾಗೂ 800ಮಿ ,4X 100ರಿಲೆ, ಶಾಟ್‌ಪುಟ್, ಲಾಂಗ್‌ಜಂಪ್, ಹೈಜಂಪ್, ಡಿಸ್ಕ್‌ತ್ರೋ ಮತು ಆಕರ್ಷಕ ಹಗ್ಗ ಜಗ್ಗಾಟ ಸರ್ಧೆ ನಡೆಯಿತು.
ಕ್ರೀಡಾಕೂಟದ ಪ್ರತಿಯೊಂದು ಸರ್ಧೆಯ ವಿಜೇತರಿಗೆ ಪ್ರಥಮ, ದೀತಿಯ ಹಾಗೂ ತೃತೀಯ ಬಹುಮಾನವಾಗಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು, ಹಾಗೂ ಸರ್ಧೆಯಲ್ಲಿ ಸಮಗ್ರ ಪ್ರಥಮ ಪ್ರಶಸ್ತಿ ಮತ್ತು ಸಮಗ್ರ ದ್ವಿತೀಯ ಪ್ರಶಸ್ತಿ ವಿಜೇತರಿಗೆ ಪದಕ ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು.
ಸರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಅತ್ಯಂತ ಅಧಿಕ ಅಂಕ ಗಳಿಸಿದ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬಳು ವಿದ್ಯಾರ್ಥಿನಿಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಯಾಗಿ ಪದಕ, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ನೀಡಿ ಗೌರಸಲಾಯಿತು.