ಪುತ್ತೂರು, ಫೆ.13 : ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿ ರಿಕ್ಷಾದಲ್ಲಿಟ್ಟಿದ್ದ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ್ದ ರಿಕ್ಷಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನರಿಮೊಗರು ಬಜಪಲ್ಲ ನಿವಾಸಿ ಬಾಲಕೃಷ್ಣ ನಾಯಕ್ (53ವ) ಬಂಧಿತ ಆರೋಪಿ.
ಪುತ್ತೂರಿನಿಂದ ನರಿಮೊಗರು ಕಡೆ ಹೋಗುತ್ತಿದ್ದ ರಿಕ್ಷಾವನ್ನು ಗಸ್ತು ತಿರುಗುತ್ತಿದ್ದ ಅಬಕಾರಿ ಪೊಲೀಸರು ತಪಾಸಣೆ ಮಾಡಿದಾಗ ರಿಕ್ಷಾದ ಡಿಕ್ಕಿಯಲ್ಲಿ ಇರಿಸಲಾಗಿದ್ದ ದಾಖಲೆಗಳಿಲ್ಲದ 180 ಎಂ.ಎಲ್‌ನ 8.64 ಲೀಟರ್ ಮೈಸೂರು ಲ್ಯಾನ್ಸರ್ ವಿಸ್ಕಿ ಹಾಗೂ ರಿಕ್ಷಾವನ್ನು ವಶಕ್ಕೆ ತಗೆದು ಕೊಂಡಿದ್ದಾರೆ.