ಮಂಗಳೂರು, ಫೆ.13: ಸಿಯಾಚಿನ್ ಗ್ಲೇಸಿಯರ್‌ನಲ್ಲಿನ ಭಾರೀ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಯೋಧರಿಗೆ ನಗರದ ಕದ್ರಿ ಪಾರ್ಕ್ ಬಳಿಯಿರುವ ಹುತಾತ್ಮ ಸ್ಮಾರಕ ಭವನದಲ್ಲಿ ಇಂದು ಬೆಳಿಗ್ಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಶಾಸ್ತಾವು ಭೂತನಾಥೇಶ್ವರ ಸಂಸ್ಥೆ ಹಾಗೂ ರಾಮಕೃಷ್ಣ ವಿದ್ಯಾಸಂಸ್ಥೆಗಳು ಆಶ್ರಯದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ರಿ. ಐ.ಎನ್.ರೈ, ಕರ್ನಲ್ ಎನ್.ಎಸ್.ಭಂಡಾರಿ, ವಿಕ್ರಮ್ ದತ್ತ, ಎಸ್.ಎಂ.ಐರನ್, ಕರ್ನಲ್ ಬಾಲಕೃಷ್ಣ, ಕದ್ರಿ ಪೊಲೀಸ್ ಇನ್‌ಸ್ಪೆಪೆಕ್ಟರ್ ಮಾರುತಿ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಹೆಚ್ಚಿನ ವಿವರ ನಿರೀಕ್ಷಿಸಿ…