ಕನ್ನಡ ವಾರ್ತೆಗಳು

ಕುಂದಾಪುರ: ಯೋಧ ಹನುಮಂತ ನಾಯ್ಕ್ ಆತ್ಮಕ್ಕೆ ಶಾಂತಿ ಕೋರಿ ಎ.ಬಿ.ವಿ.ಪಿ.ಯಿಂದ ಶ್ರದ್ಧಾಂಜಲಿ

Pinterest LinkedIn Tumblr

ಕುಂದಾಪುರ: ಸಿಯಾಚಿನ್ ಹಿಮಪಾತದಲ್ಲಿ ವಿಧಿಯ ಕ್ರೂರ ಲೀಲೆಗೆ ಬಲಿಯಾದ ಯೋಧ ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕುಂದಾಪುರ ಘಟಕ ಗಾಂಧಿ ಮೈದಾನದಲ್ಲಿ ಕ್ಯಾಂಡಲ್ ಮಾರ್ಚ್ ನ ಮುಖಾಂತರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Kundapura_ABVP_Candle march (2) Kundapura_ABVP_Candle march (3) Kundapura_ABVP_Candle march (1) Kundapura_ABVP_Candle march (5) Kundapura_ABVP_Candle march (4)

ಕುಂದಾಪುರದ ಎಸ್ .ಐ. ನಾಸಿರ್ ಹುಸೇನ್ ಅವರ ಉಪಸ್ಥಿತಿಯಲ್ಲಿ ಪುಷ್ಪಾರ್ಚನೆಗೈದು ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಸಭೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೇಂದ್ರೀಯ ಕಾರ್ಯ ಸಮತಿ ಸದಸ್ಯರಾದ ಚೈತ್ರಾ ಕುಂದಾಪುರˌ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಪೂಜಾರಿˌತಾಲೂಕ್ ಸಂಚಾಲಕ್ ಶ್ರೀಧರ್ ಕಂಡ್ಲೂರು. ನಿರಂಜನ್ ˌಅಭಿಷೇಕ್ , ಪ್ರಥ್ವೀಶ್ ಬಸ್ರೂರು ನಗರ ಕಾರ್ಯದರ್ಶಿ ಭರತ, ಪ್ರಥಮ್ ಮೊದಲಾದವರು ಉಪಸ್ಥಿತರಿದ್ದರು

Write A Comment