ಕನ್ನಡ ವಾರ್ತೆಗಳು

ಕೋಟ: ಗರ್ಭಿಣಿ ಮಹಿಳೆ ಆತ್ಮಹತ್ಯೆ; ಕೌಟುಂಬಿಕ ಜೀವನದಲ್ಲಿ ಜಿಗುಪ್ಸೆ ಶಂಕೆ

Pinterest LinkedIn Tumblr

ಉಡುಪಿ: ಕೌಟುಂಬಿಕ ಜೀವನದಲ್ಲಿ ಜಿಗುಪ್ಸೆಗೊಂದ ಐದು ತಿಂಗಳ ಗರ್ಭಿಣಿ ಮಹಿಳೆಯೋರ್ವರು ಪತಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಕೋಟ ಸಮೀಪದ ಬನ್ನಾಡಿಯ ಕೊತ್ತಾಡಿ ಎಂಬಲ್ಲಿ ಮಂಗಳವಾರ ನಡೆದಿದೆ.

ಮಣೂರು ನಿವಾಸಿಯಾದ ರೇಖಾ(28) ಆತ್ಮಹತ್ಯೆಗೆ ಶರಣಾದವರು. ಈಕೆ ಐದು ತಿಂಗಳ ಗರ್ಭಿಣಿಯಾಗಿದ್ದಾರೆನ್ನಲಾಗಿದೆ.

hanging-fan

ಘಟನೆ ವಿವರ: ಸುಮಾರು ಏಳು ವರ್ಷಗಳ ಹಿಂದೆ ಕೋಟ ಸಮೀಪದ ವಡ್ಡರ್ಸೆ ಗ್ರಾಮದ ಕೊತ್ತಾಡಿ ನಿವಾಸಿ ಗಣೇಶ್ ಪೂಜಾರಿ ಎನ್ನುವವರನ್ನು ಪ್ರೇಮ ವಿವಾಹವಾಗಿದ್ದ ರೇಖಾ ಎರಡು ವರ್ಷ ಪ್ರಾಯದ ಹೆಣ್ಣು ಮಗು ಹೊಂದಿದ್ದು ಸದ್ಯ ಐದು ತಿಂಗಳ ಗರ್ಭಿಣಿಯಾದ್ದರು. ಮಂಗಳವಾರ ಬೆಳಿಗ್ಗೆ ಡೆತ್ ನೋಟ್ ಬರೆದಿಟ್ಟು ಪತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಈಕೆ ಕೌಟುಂಬಿಕ ಜೀವನದಲ್ಲಿ ಜಿಗುಪ್ಸೆ ಬಗ್ಗೆ ಉಲ್ಲೇಖಿಸಿದ್ದು ಯಾರ ಬಗ್ಗೆಯೂ ಸ್ಪಷ್ಟವಾಗಿ ಆರೋಪಿಸಿಲ್ಲ ಎನ್ನಲಾಗಿದೆ.

ಮನೆಯಲ್ಲಿ ದುಡುಕಿನ ಸ್ವಭಾವದವರಾಗಿದ್ದ ರೇಖಾ ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆಂಬುದು ಇನ್ನೂ ನಿಗೂಢವಾಗಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

(ಸಾಂದರ್ಭಿಕ ಚಿತ್ರ)

Write A Comment