ಕನ್ನಡ ವಾರ್ತೆಗಳು

ನಗರದ ಖಾಸಗಿ ಕಾಲೇಜು ವಿದ್ಯಾರ್ಥಿನಿಯರಿಬ್ಬರು ನಿಗೂಢ ನಾಪತ್ತೆ : ಅಪಹರಣ ಶಂಕೆ..!

Pinterest LinkedIn Tumblr

Missing_Colg_Girls_1

ಮಂಗಳೂರು, ಫೆ.04: ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯರಿಬ್ಬರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು ಅಪಹರಣ ಶಂಕೆ ವ್ಯಕ್ತವಾಗಿದೆ.

ಚಿಲಿಂಬಿ ನಿವಾಸಿ ಜಾನ್ ಡೇಸಾ ಎಂಬವರ ಪುತ್ರಿ ಜಾಕ್ಲಿನ್ (17) ಸುರತ್ಕಲ್ ಸಮೀಪದ ನಿವಾಸಿ ಲಕ್ಮೀಧರ ಎಂಬವರ ಪುತ್ರಿ ಸ್ಮತಿ(17) ನಾಪತ್ತೆಯಾದ ಯುವತಿಯರು.

ಇವರಿಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರಾಗಿದ್ದು ಇಬ್ಬರೂ ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ಪಿಯುಸಿ ವಾಣೀಜ್ಯ ವಿಭಾಗದ ವಿದ್ಯಾರ್ಥಿನಿಯರಾಗಿದ್ದು ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ.

ಸೋಮವಾರ ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಬಂದಿದ್ದ ಈ ವಿದ್ಯಾರ್ಥಿನಿಯರು ಸಂಜೆಯಾದರೂ ತಮ್ಮ ಮನೆಗಳಿಗೆ ವಾಪಾಸಾಗದೇ ನಾಪತ್ತೆಯಾಗಿದ್ದಾರೆ.ಇವರನ್ನು ಯೊರೋ ಅಪಹರಿಸಿರಬೇಕು ಎಂಬ ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಲಾಗಿದೆ.

ಇವರ ಮಾಹಿತಿ ದೊರೆತಲ್ಲಿ ಪೊಲೀಸ್ ಆಯುಕ್ತರು 0824-2220801 ಅಥವಾ ಪೊಲೀಸ್ ನಿರೀಕ್ಷಕರು 0824-220516,9480805338 ಅಥವಾ ಉಪ ನಿರೀಕ್ಷಕರು 9480805345 ಸಂಖ್ಯೆಯನ್ನು ಸಂಪರ್ಕಿಸ ಬಹುದು ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment