ಕನ್ನಡ ವಾರ್ತೆಗಳು

ಸೌಕೂರು ದೇವಸ್ಥಾನ ಕಳ್ಳತನ ಪ್ರಕರಣ: ಎಸ್ಪಿ ಅಣ್ಣಾಮಲೈ ಭೇಟಿ; ಮುಂದುವರಿದ ತನಿಖೆ

Pinterest LinkedIn Tumblr

ಕುಂದಾಪುರ: ತಾಲೂಕಿನ ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೋಮವಾರ ತಡರಾತ್ರಿ ಕಳ್ಳತನ ನಡೆದಿದ್ದು ಸ್ಥಳಕ್ಕೆ ಮಂಗಳವಾರ ಸಂಜೆ ಉಡುಪಿ ಜಿಲ್ಲಾ ಎಸ್ಪಿ ಕೆ. ಅಣ್ಣಾಮಲೈ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಅವರು, ಆರು ತಿಂಗಳ ಹಿಂದೆ ನಡೆದ ಪ್ರಕರಣದಲ್ಲಿ ತನಿಖೆಗೆ ಸಂಬಂಧಿಸಿದ ಹಾಗೇ ಯಾವುದೇ ಪೂರಕ ಸುಳಿವು ಇರಲಿಲ್ಲ, ಆದರೇ ಈ ಕಳ್ಳತನ ಪ್ರಕರಣದಲ್ಲಿ ಮಹತ್ವದ ಸುಳಿವು ಲಭ್ಯವಾಗಿದ್ದು ಇದನ್ನು ಕೇಂದ್ರೀಕರಿಸಿಕೊಂಡು ಕಳ್ಳನ ಜಾಡನ್ನು ಹಿಡಿಯುತ್ತೇವೆ. ಮೇಲ್ನೋಟಕ್ಕೆ ಓರ್ವನೇ ಈ ಕೃತ್ಯ ನಡೆಸಿದ ಬಗ್ಗೆ ಮಾಹಿತಿ ಲಭಿಸಿದ್ದು ಶೀಘ್ರದಲ್ಲಿ ಆತನನ್ನು ಬಂಧಿಸುತ್ತೇವೆ ಎನ್ನುವ ಭರವಸೆ ನೀಡಿದರು.

Soukuru Temple_Theft Case_SP visit (5) Soukuru Temple_Theft Case_SP visit (1) Soukuru Temple_Theft Case_SP visit (7) Soukuru Temple_Theft Case_SP visit (12) Soukuru Temple_Theft Case_SP visit (9) Soukuru Temple_Theft Case_SP visit (10) Soukuru Temple_Theft Case_SP visit (3) Soukuru Temple_Theft Case_SP visit (8) Soukuru Temple_Theft Case_SP visit (4) Soukuru Temple_Theft Case_SP visit (2) Soukuru Temple_Theft Case_SP visit (6) Soukuru Temple_Theft Case_SP visit (11)

ನೆರೆದ ಭಕ್ತರು ಹಾಗೂ ಸ್ಥಳಿಯರೊಂದಿಗೆ ಮಾತನಾಡಿದ ಕೆ. ಅಣ್ಣಾಮಲೈ ಅವರು, ಜಿಲ್ಲೆಯಲ್ಲಿ 3,700 ದೇವಸ್ಥಾನಗಳಿದ್ದು ಎಲ್ಲಾ ದೇವಳಕ್ಕೂ ಪೊಲೀಸರು ಭದ್ರತೆ ನೀಡುವುದು ಕಷ್ಟಕರ. ಯಾರೂ ಪೊಲೀಸರ ಮೇಲೆ ಅಥವಾ ದೇವಸ್ಥಾನ ಆಡಳಿತ ವ್ಯವಸ್ಥೆ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇಲ್ಲಿನ ಕೆಲವು ಭದ್ರತೆ ಲೋಪಗಳ ಬಗ್ಗೆ ಸಾರ್ವಜನಿಕರೂ ಮನಗಂಡು ದೇವಸ್ಥಾನದೊಂದಿಗೆ ಕೈಜೋಡಿಸಿ ಅದನ್ನು ಸರಿಪಡಿಸಬೇಕಿದೆ. ಎಲ್ಲಾ ದೇವಸ್ಥಾನಕ್ಕೆ ಪೊಲೀಸರು ಭದ್ರತೆ ಹಾಕಲು ಅಸಾಧ್ಯ, ದೇವಸ್ಥಾನದವರು ಖಾಸಗಿ ಭದ್ರತೆಯನ್ನು ಒದಗಿಸಿಕೊಳ್ಳುವುದು ಇದಕ್ಕೆ ಸೂಕ್ತ ಪರಿಹಾರೆವೆಂದರು. ಸೆಕ್ಯೂರಿಟಿ ಹೆಚ್ಚಿಸುವ ಬಗ್ಗೆ ಜಿಲ್ಲಾಧಿಕಾರಿಗಳಜೊತೆ ಮಾತುಕತೆ ನಡೆಸಿ ಒಂದು ಸಭೆ ಕರೆಯುವ ಬಗ್ಗೆಯೂ ತಿಳಿಸಿದರು.

ಮುಂದುವರಿದ ತನಿಖೆ
ಇನ್ನು ಕಳ್ಳತನ ಪ್ರಕರಣವನ್ನು ಕುಂದಾಪುರ ಪೊಲೀಸರು ಚಾಲೆಂಜ್ ಆಗಿ ತೆಗೆದುಕೊಂಡಿದ್ದು ಸಿಸಿ ಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಈಗಾಗಲೇ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಕುಂದಾಪುರ ಎಸ್ಸೈ ನಾಸೀರ್ ಹುಸೇನ್ ಅವರ ನೇತ್ರತ್ವದಲ್ಲಿ ಸಿಬ್ಬಂದಿಗಳು ಕಳ್ಳನ ಜಾಡು ಹಿಡಿದು ಹೊರಟಿದ್ದಾರೆ. ಕೆಲವೊಂದು ಮಹತ್ವದ ಸುಳಿವುಗಳು ಈಗಾಗಲೇ ಪೊಲಿಸರಿಗೆ ಸಿಕ್ಕಿದೆ ಎನ್ನಲಾಗಿದ್ದು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ
ದೇವಳದಲ್ಲಿ ಸೋಮವಾರ ತಡರಾತ್ರಿ ಕಳ್ಳತನ ನಡೆದಿದ್ದು, ಬೆಳ್ಳಿಯ ಮುಖವಾಡ, 2 ಬೆಳ್ಳಿ ಕೊಡೆಗಳು, 2ಚಿನ್ನದ ಮೂಗೂತಿ, ಚಿನ್ನದ ಕರಿಮಣಿ, ಸರ, ಹಾಗೂ ಹುಂಡಿಯನ್ನು ಕಳವುಗೈಯಲಾಗಿದೆ. ೧,೩೫೦೦೦ ಅಂದಾಜು ಮೌಲ್ಯದ ಸೊತ್ತು ಕಳವಾಗಿತ್ತು. ಹುಂಡಿ ಹಾಗೂ ಸಣ್ಣ ಕರಿಮಣಿ ಸರವೊಂದು ದೇವಳದ ಎದುರುಗಡೆಯ ಪೊದೆ ಸಮೀಪ ಪತ್ತೆಯಾಗಿತ್ತು.

ಚಿತ್ರ,ವರದಿ- ಯೋಗೀಶ್ ಕುಂಭಾಸಿ

ಇದನ್ನೂ ಓದಿರಿ-  ಸೌಕೂರು ದೇವಳದಲ್ಲಿ ಆರು ತಿಂಗಳಲ್ಲಿ ಎರಡನೇ ಕಳ್ಳತನ: ಬೆಳ್ಳಿ ಬಂಗಾರ ಕಳವು; ಭದ್ರತೆ ಬಗ್ಗೆ ಜನರ ಆಕ್ರೋಷ

Write A Comment