ನವದೆಹಲಿ,ಫೆ.2: ಐಸಿಸ್ ಮತ್ತು ಅಲ್-ಶಾಮ್ ವಿದೇಶಿಗರು ಹಾಗೂ ಗೋವಾ, ಮಹಾರಾಷ್ಟ್ರದ ಪ್ರಮುಖ ರಕ್ಷಣಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಬಂಧಿತ ಶಂಕಿತ ಉಗ್ರರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರರಹ ದಳ ತನಿಖೆ ಮುಂದುವರೆಸಿದ್ದು, ಇಂಡಿಯನ್ ಮುಜಾಹಿದ್ದೀನ್‍ನಿಂದ ಐಸಿಸ್‍ಗೆ ಸೇರ್ಪಡೆಗೊಂಡ, ಭಾರತದ ಯುವಕರನ್ನು ಉಗ್ರವಾದಕ್ಕೆ ಸೆಳೆಯುತ್ತಿದ್ದ ಶಫಿ ಅರ್ಮರ್ ಅಲಿಯಾಸ್ ಯೂಸೂಪ್‍ನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.
ಐಸಿಸ್‍ನ ಭಾರತದ ಮುಖ್ಯಸ್ಥ ಮುದಾಬ್ಬೀರ್ ಶೇಖ್‍ನೊಂದಿಗೆ ಈತನ ಸಹಾಯಕ ಖಲೀದ್ ಅಹ್ಮದ್ ಅಲಿ ನವಾಜುದ್ದೀನ್ ಅಲಿಯಾಸ್ ರಿಜ್ವಾನ್ ನೇತೃತ್ವದಲ್ಲಿ ಎಲ್ಲಾ ದಾಳಿ ಸಂಚು ನಡೆಸಲಾಗಿದೆ.
ಸುರಕ್ಷಿತ ಮನೆಗಳನ್ನು ಹುಡುಕುವಂತೆ ಖಲೀದ್ ಹೇಳಿದ್ದು, ಅದರಂತೆ ಅರ್ಮರ್ ಮೊಹಸಿನ್ ಇಬ್ರಾಹಿಂ ಸಯೀದ್‍ಗೆ ಈ ವಿಚಾರ ಹೇಳಿದ್ದ, ಕಾರು ಕಳವು ಮಾಡುವ ಯೋಜನೆಯನ್ನು ರೂಪಿಸಲಾಗಿತ್ತು. ಮಿಲಿಟರಿ ವಾಹನ ಕಳವು ಮಾಡಿ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸುವ ಯೋಜನೆಯನ್ನು ರೂಪಿಸಲಾಗಿತ್ತು ಎಂಬುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
