ಕುಂದಾಪುರ: ವಿವಾಹಿತ ಯುವತಿಯೋರ್ವರು ತವರು ಮನೆಯಿಂದ ಗಂಡನ ಮನೆಗೆಂದು ತೆರಳಿದ ಬಳಿಕ ನಿಗೂಢವಾಗಿ ನಾಪತ್ತೆಯಾದ ಘಟನೆ ಬೈಂದೂರಿನ ಬಿಜೂರು ಎಂಬಲ್ಲಿ ಶುಕ್ರವಾರ ನಡೆದಿದೆ.
ವಿದ್ಯಾಶ್ರೀ (22) ಎನ್ನುವವರೇ ನಾಪತ್ತೆಯಾದವರು.
ಕುಂದಾಪುರ ತಾಲೂಕಿನ ಆರ್ಡಿಯ ಆಲ್ಬಾಡಿ ಗ್ರಾಮದ ಸಂತೋಷ್ ಶೆಟ್ಟಿ ಎನ್ನುವವರ ಪತ್ನಿ ವಿದ್ಯಾಶ್ರೀ ಅವರು ಗಂಡನ ಮನೆಯಿಂದ ಇತ್ತೀಚೆಗಷ್ಟೇ ತವರು ಮನೆಯಾದ ಬಿಜೂರಿನ ಚೌಲಾಡಿಗೆ ಬಂದಿದ್ದರು. ಶುಕ್ರವಾರ ತವರು ಮನೆಯಿಂದ ತನ್ನ ಗಂಡ ಸಂತೋಷ ಶೆಟ್ಟಿ ಅವರ ಮನೆಯಾದ ಅಲ್ಬಾಡಿ ಗ್ರಾಮದ ಆರ್ಡಿ ಎಂಬಲ್ಲಿಗೆ ಹೋಗುವುದಾಗಿ ಹೇಳಿ ತೆರಳಿದ್ದು ರಾತ್ರಿಯಾದರೂ ವಿದ್ಯಾಶ್ರೀ ಅವರು ಗಂಡನ ಮನೆಗೆ ಹೋಗದೇ ವಾಪಾಸು ಮನೆಗೂ ಬಾರದೇ ಕಾಣೆಯಾಗಿದ್ದಾರೆ.
ಮನೆಯವರು ಸತತ ಹುಡುಕಾಟ ನಡೆಸಿದರೂ ವಿದ್ಯಾಶ್ರೀ ಪತ್ತೆಯಾಗಿಲ್ಲ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.