ಕನ್ನಡ ವಾರ್ತೆಗಳು

ಮೂಲ್ಕಿ, ಬಪ್ಪನಾಡು: ರಾಷ್ಟ್ರ ಮಟ್ಟದ ಜಲ ಸಾಹಸ ಶಿಬಿರಕ್ಕೆ ಚಾಲನೆ.

Pinterest LinkedIn Tumblr

Mulaki_rovers_scout_1

ಮಂಗಳೂರು,ಜ.28: ಮೂಲ್ಕಿಯ ಬಪ್ಪನಾಡು ಗ್ರಾಮದ ಕೊಳಚಿಕಂಬಳ ಬಳಿಯ ಸಮುದ್ರ ಮತ್ತು ಶಾಂಭವಿ ನದಿಯ ಸಮೀಪದ ಮಂತ್ರ ಸರ್ಫ್ ಕ್ಲಬ್ ನ ಐ.ಎ ಕೈರನ್ನ ವೇದಿಕೆಯಲ್ಲಿ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ನ ಹಿರಿಯ ವಿಧ್ಯಾರ್ಥಿಗಳ ವಿಭಾಗವಾಗಿರುವ ರೋವರ್ಸ್ ಎಂಡ್ ರೇಂಜರ್ಸ್ ವಿಧ್ಯಾರ್ಥಿಗಳಿಗಾಗಿ ನಡೆಯುವ ರಾಷ್ಟ್ರ ಮಟ್ಟದ ಜಲ ಸಾಹಸ ಶಿಬಿರ -2016 ಕ್ಕೆ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ರಾಜ್ಯ ಮುಖ್ಯ ಅಯುಕ್ತ ಪಿ.ಜಿ.ಆರ್ ಸಿಂದ್ಯಾ ರವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಸಮುದ್ರ ಕಿನಾರೆಯಲ್ಲಿ ಹಾಗೂ ಸ್ವಿಮ್ಮಿಂಗ್ ಪೂಲ್ ನ ಜೀವಾಪಾಯದಲ್ಲಿರುವವರಿಗೆ ರಕ್ಷಣೆ ಹಾಗೂ ಜೀವ ರಕ್ಷಕರನ್ನು ತರಬೇತುಗೊಳಿಸುವ ಕಾರ್ಯವನ್ನು ಈ ದ.ಕ ಜಿಲ್ಲೆಯ ಯುವಜನ ಸೇವಾ ಇಲಾಖೆ ಹಾಗೂ ಪೊಲೀಸ್ ಇಲಾಖೆ ಬಹಳ ಮುರ್ತುವರ್ಜಿಯಿಂದ ಕೆಲಸ ನಿರ್ವಹಿಸಬೇಕು.

ಇತ್ತೀಚೇಗೆ ಚೆನ್ನೈನಲ್ಲಿ ಸಂಭವಿಸಿದ ಜಲ ಪ್ರವಾಹ, ಲಾತೋರ್, ನೇಪಾಳ ಮೊದಲಾದ ಕಡೆ ನಡೆದ ಜಲ ಪ್ರವಾಹದ ಸಂಧರ್ಭದಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳು ಸೇವಾ ಕಾರ್ಯ ನಡೆಸಿದ್ದಾರೆ ಎಂದವರು ಈ ಸಂಧರ್ಭದಲ್ಲಿ ಹೇಳಿದರು.

Mulaki_rovers_scout_2 Mulaki_rovers_scout_3 Mulaki_rovers_scout_4 Mulaki_rovers_scout_5 Mulaki_rovers_scout_6 Mulaki_rovers_scout_7 Mulaki_rovers_scout_8 Mulaki_rovers_scout_9 Mulaki_rovers_scout_10 Mulaki_rovers_scout_11 Mulaki_rovers_scout_12 Mulaki_rovers_scout_13 Mulaki_rovers_scout_14 Mulaki_rovers_scout_15 Mulaki_rovers_scout_16 Mulaki_rovers_scout_17 Mulaki_rovers_scout_18 Mulaki_rovers_scout_19 Mulaki_rovers_scout_20 Mulaki_rovers_scout_21 Mulaki_rovers_scout_22 Mulaki_rovers_scout_23 Mulaki_rovers_scout_24 Mulaki_rovers_scout_25 Mulaki_rovers_scout_26 Mulaki_rovers_scout_29 Mulaki_rovers_scout_30 Mulaki_rovers_scout_31 Mulaki_rovers_scout_32

ರಾಷ್ಟ್ರಮಟ್ಟದ ಶಿಬಿರವು ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ದ.ಕ ಜಿಲ್ಲೆಯ ಮೂಲ್ಕಿಯಲ್ಲಿ ನಡೆಯುತ್ತಿರುವುದು ದಾಖಲೆಯಾಗಲಿದೆ. ಶಿಬಿರವು ಅಂತರಾಷ್ಟ್ರೀಯ ಮಟ್ಟದಲ್ಲಿ ಜಲ ಸಾಹಸ ಕ್ರೀಡೆಯಲ್ಲಿ ಪ್ರಸಿದ್ದಿಯಾಗಿರುವ ಆಮೇರಿಕಾ ದೇಶ ಮೂಲಕ ಮಂತ್ರ ಸರ್ಫ್‌ಕ್ಲಬ್ ಸಹಯೋಗದಲ್ಲಿ ವಿಶಿಷ್ಟ ರೀತಿಯ ಸಾಹಸ ಕ್ರೀಡೆಯ ತರಬೇತುದಾರರಿಂದ ವಿಧ್ಯಾರ್ಥಿಗಳಿಗೆ ಮಾಹಿತಿ ಹಾಗೂ ತರಬೇತಿಯನ್ನು ನೀಡಲಾಗಿವುದು ಎಂದು ದ ಕ ಜಿಲ್ಲಾಧಿಕಾರಿ ಹಾಗೂ ದ ಕ ಜಿಲ್ಲಾ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಘಟಕದ ಅಧ್ಯಕ್ಷ ಎ.ಬಿ ಇಬ್ರಾಹಿಂ ಅವರು ಈ ಸಂಧರ್ಭದಲ್ಲಿ ತಿಳಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಮುಲ್ಕಿ ನ್ಗರ ಪಂಚಾಯತ್ ನ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಮಾಜಿ ಸಚಿವ ಬಿ.ನಾಗಾರಜ ಶೆಟ್ಟಿ, ಜಿಲಾಧಿಕಾರಿ ಎ.ಬಿ ಇಬ್ರಾಹೀಂ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಶರಣಪ್ಪ ಎಸ್.ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀ ವಿಧ್ಯಾ, ದ.ಕ ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ ಮೋಹನ್ , ಐಕಳ ಹರೀಶ್ ಶೆಟ್ಟಿ, ಮಂಗಳೂರು ಲಯನ್ಸ್ ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರಿ, ಸ್ಕೌಟ್ ಗೈಡ್ಸ್ ಸ್ಬಾಗತ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿ ಧನಂಜಯ ಶೆಟ್ಟಿ, ಇಅರಿನ್ ಡಿ.ಕುನ್ನಾ ಮೊದಲಾದವರು ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Write A Comment