ಕನ್ನಡ ವಾರ್ತೆಗಳು

ಮಂಗಳೂರು : ಜಿಲ್ಲಾಡಳಿತದದಿಂದ 67ನೇ ಗಣರಾಜ್ಯೋತ್ಸವ ಆಚರಣೆ : 6 ಮಂದಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಗೌರವ

Pinterest LinkedIn Tumblr

Republic_day_photo_1

ಮಂಗಳೂರು, ಜ. 26: ದ.ಕ.ಜಿಲ್ಲಾಡಳಿತದ ಅಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಇಂದು 67ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ,ಪರೇಡ್ ಗೌರವ ಸ್ವೀಕರಿಸಿದ ಬಳಿಕ ಗಣರಾಜ್ಯೋತ್ಸವ ಸಂದೇಶ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಶ್ರೇಷ್ಠತೆ ಗಣರಾಜ್ಯೋತ್ಸವ. ನಮ್ಮದು ಜ್ಯಾತ್ಯತೀತ ಹಾಗೂ ವಿವಿಧತೆಯಲ್ಲಿ ಏಕತೆ ಇರುವ ರಾಷ್ಟ್ರ ಎಂದು ಹೇಳಿದ ಸಚಿವರು, ಈ ಸಂದರ್ಭದಲ್ಲಿ ರಾಜ್ಯ ಸರಕಾರವು ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಪ್ರಸ್ತಾಪಿಸಿದರು, ಸರಕಾರದ ಮಹತ್ವದ ಯೋಜನೆಯಾದ ಅನ್ನಭಾಗ್ಯದಡಿ ಜಿಲ್ಲೆಯಲ್ಲಿ ವಾರ್ಷಿಕ 36 ಕೋಟಿ ರೂ. ಅನುದಾನ ವಿನಿಯೋಜಿಸಲಾಗಿದೆ. ಒಟ್ಟು 2 ಲಕ್ಷಕ್ಕೂ ಅಧಿಕ ಮೇಲ್ಪಟ್ಟು ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ ಎಂದರು.

ಕೇಂದ್ರ ಸರಕಾರದ ಅಮೃತ ಯೋಜನೆಯಡಿ 200 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದ್ದು, ಒಳಚರಂಡಿ, ಮಳೆ ನೀರು, ಚರಂಡಿ ಹಾಗೂ ಪಾರ್ಕ್ ಅಭಿವೃದ್ಧಿ ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ರೈ ತಿಳಿಸಿದರು.

Republic_day_photo_2 Republic_day_photo_3 Republic_day_photo_4 Republic_day_photo_5 Republic_day_photo_6 Republic_day_photo_7 Republic_day_photo_8 Republic_day_photo_9 Republic_day_photo_10 Republic_day_photo_11 Republic_day_photo_12 Republic_day_photo_13 Republic_day_photo_14 Republic_day_photo_15 Republic_day_photo_16 Republic_day_photo_17 Republic_day_photo_18

ನಗರ ಪ್ರದೇಶದ ಸರಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡಿರುವವರನ್ನು ಸಕ್ರಮೀಕರಣಗೊಳಿಸಲು 94ಸಿಸಿ ಜಾರಿಗೆ ತಂದಿದ್ದು, ಅರ್ಜಿ ಸ್ವೀಕರಿಸುವ ಕಾರ್ಯ ಪ್ರಗತಿಯಲ್ಲಿದೆ. ವಿಕಲಚೇತನರನ್ನು ವಿವಹಾವಾಗುವ ಸಾಮಾನ್ಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 50,000 ರೂ. ಪ್ರೋತ್ಸಾಹ ಧನ ನೀಡಲು ಯೋಜಿಸಲಾಗಿದೆ. ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲೆಯ ಮಲೆಕುಡಿಯ ಜನಾಂಗದವರಲ್ಲಿ ಸಿಕ್‌ಸೆಲ್ ಅನಿಮಿಯಾ ಕಾಯಿಲೆಯಿಂದ ಬಳಲುವವರಿಗೆ ಸಮಗ್ರ ಪಾಲನೆ ದೃಷ್ಟಿಯಿಂದ 120 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದವರು ಹೇಳಿದರು.

ರೈತರು ತಮ್ಮ ಜಮೀನುಗಳ ಸಮರ್ಪಕ ದಾಖಲೆಗಳನ್ನು ಇಡುವ ಸರಕಾರದ ಪೋಡಿ ಮುಕ್ತ ಅಭಿಯಾನ ಯೋಜನೆಯಡಿ 30 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಆ ಗ್ರಾಮಗಳ ಅಳತೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. 2ನೆ ಹಂತದಲ್ಲಿ ಮತ್ತೆ 30 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಸರಕಾರಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಸಕ್ರಮೀಕರಣ ಮಾಡುವ ಉದ್ದೇಶದಿಂದ 94 ಸಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಈವರೆಗೆ 2400 ಚದರ ಅಡಿ ಇದ್ದ ವಿಸ್ತೀರ್ಣವನ್ನು 4000 ಚದರ ಅಡಿಗಳಿಗೆ ಹೆಚ್ಚಿಸಾಗಿದೆ. ಜಿಲ್ಲೆಯಲ್ಲಿ 54,000 ಅರ್ಜಿಗಳು ಸ್ವೀಕಾರವಾಗಿ, 4492 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಸಚಿವರು ಹೇಳಿದರು.

Republic_day_photo_19 Republic_day_photo_20 Republic_day_photo_21 Republic_day_photo_22 Republic_day_photo_23 Republic_day_photo_24 Republic_day_photo_25 Republic_day_photo_26

6 ಮಂದಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಗೌರವ :

ಸರ್ಕಾರಿ ಸೇವೆಯಲ್ಲಿ ಗಣನೀಯ ಕೊಡುಗೆ ನೀಡಿದ 6 ಮಂದಿಗೆ ದ.ಕ.  ಜಿಲ್ಲಾ ಮಟ್ಟದ ‘ಸರ್ವೋತ್ತಮ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಅರಣ್ಯ ಇಲಾಖೆಯ ಪಿ ಶ್ರೀಧರ, ಎಸ್‌ಪಿ ಕಚೇರಿಯ ರವಿಚಂದ್ರ ಎ, ಡೀಸಿ ಕಚೇರಿಯ ಬಿ ಹೈದರ್ ಅಲಿ, ಡೀಸಿ ಕಚೇರಿಯ ಪ್ರಭಾಕರ ಜಿ ಪಂ.ನ ಮಂಜುಳಾ ಮತ್ತು ತೋಟಗಾರಿಕೆ ಇಲಾಖೆಯ ರಮೇಶ್ ಅವರು ಈ ಪ್ರಶಸ್ತಿ ಸ್ವೀಕರಿಸಿದರು.

ರಾಷ್ಟ್ರಪತಿಯವರ ಶ್ಲಾಘನೀಯ ಪದಕಕ್ಕೆ ಆಯ್ಕೆಯಾಗಿರುವ ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ಮಂಗಳೂರು ನಗರ ಉತ್ತರ ಉತ್ತರ ಉಪ ವಿಭಾಗದ ಎಸಿಪಿ ಮದನ್ ಎ. ಗಾಂವಕರ್, ರಾಜ್ಯ ಮಟ್ಟದ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲಾಧಿಕಾರಿ ಕಚೇರಿಯ ಕಂದಾಯ ವಿಭಾಗದ ಅಧೀಕ್ಷಕ ಶೇಖ್ ಹಸನ್‌ರವರನ್ನು ಸಚಿವರು ಅಭಿನಂದಿಸಿದರು.

ಆಕರ್ಷಕ ಪಥ ಸಂಚಲನ :

ಈ ಸಂದರ್ಭದಲ್ಲಿ ನಗರದ ವಿವಿಧ ಶಾಲಾ-ಕಾಲೇಜುಗಳ ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ಭಾರತ ಸೇವಾ ದಳದ ಕಾರ್ಯಕರ್ತರು, ಪೊಲೀಸ್ ವಿಭಾಗ ಸೇರಿದಂತೆ 17 ತಂಡಗಳ ಆಕರ್ಷಕ ಪಥ ಸಂಚಲನ ನಡೆಸಿದರು. ನಗರದ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ದೇಶಾಭಿಮಾನದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಐವನ್ ಡಿಸೋಜಾ, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Write A Comment