ನವದೆಹಲಿ: ಗಣ ರಾಜ್ಯೋತ್ಸವ ಹಿನ್ನೆಲೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ದೇಶದ ಅತ್ಯಂತ ಉನ್ನತ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ.
ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಈನಾಡು ಸಮೂಹ ಸಂಸ್ಥೆ ಸಂಸ್ಥಾಪಕ ರಾಮೋಜಿ ರಾವ್, ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಆಧ್ಯಾತ್ಮ ಗುರು ಶ್ರೀ ರವಿಶಂಕರ್ ಗುರೂಜಿ ಜಮ್ಮು ಕಾಶ್ಮೀರ ರಾಜ್ಯಪಾಲ ಜಗಮೋಹನ್ ಅವರನ್ನು ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರೂ ಕೂಡ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಸಾನಿಯಾ ಮಿರ್ಜಾ, ಸಿಎಜಿ ವಿನೋದ್ ರಾಯ್ ಸೈನಾ ನೆಹ್ವಾಲ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ಸ್ವಾಮಿ ತೇಜಮಯಾನಂದ, ಗಿರಿಜಾ ರೆಡ್ಡಿ, ಇಂದು ಜೈನ್ ನಾಗೇಶ್ವರ ರೆಡ್ಡಿ, ಬರ್ಜಿಂದರ್ ಸಿಂಗ್ ಹಮ್ ದರ್ದ್, ರಾಮಾನುಜಾ ತಾತಾಚಾರ್ಯ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇನ್ನೂ ಸಿನಿಮಾ ಕ್ಷೇತ್ರದಲ್ಲಿ ಸಾಧನೆಗಾಗಿ ನಟ ಅನುಪಮ್ ಕೇರ್, ಅಜಯ್ ದೇವಗನ್, ಪ್ರಿಯಾಂಕ ಚೋಪ್ರಾ ಅವರಿಗೆ ಪದ್ಮ ಶ್ರೀ ಪ್ರಶಸ್ತಿ ನೀಡಲಾಗಿದೆ.