ಮಂಗಳೂರ,ಜ.25 : ದೇಶದ ಪ್ರತಿ ಬ್ಯಾಣ್ಕ್ ಗಳು ಇಂದು ರಾಷ್ಟ್ರೀಕರಣವಾಗದೇ ಇದ್ದಿದ್ದರೆ ದೇಶದಲ್ಲಿ ಹಸಿರು ಕ್ರಾಂತಿ ಯಶಸ್ವಿಯಾಗಲು ಸಾಧ್ಯವಿರಲಿಲ್ಲ ಎಂದು ನಗರದ ಟಿ.ಎಂ.ಎ.ಪೈ ಕನ್ವೆಶ್ಶನ್ ಹಾಲ್‌ನಲ್ಲಿ 2 ದಿನಗಳ ನಡೆಯಲಿರುವ ಕಾರ್ಪೋರೇಶನ್ ಬ್ಯಾಂಕ್ ಆಫೀಸರ್ ಆರ್ಗನೈಸೇಶನ್ಸ್(ಸಿಬಿಒಒ)ನ 20ನೇ ಅಖೀಲ ಭಾರತ ಸಮ್ಮೇಳನವನ್ನು ರವಿವಾರ ಹೊಸದಿಲ್ಲಿ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಪ್ರಭಾತ್ ಪಟ್ನಾಯಕ್ ಅವರು ಉದ್ಘಾಟಿಸಿ ಮಾತನಾಡಿದರು.
ಕೃಷಿ ಕ್ಷೇತ್ರಕ್ಕೂ ಬ್ಯಾಂಕುಗಳು ಸಾಲ ನೀಡಲು ಆರಂಭಿಸಿದ ಬಳಿಕ ದೇಶದ ಕೃಷಿಯೂ ಸುಧಾರಣೆ ಕಂಡಿದೆ. ಹೀಗೆ ಪ್ರತಿಯೊಂದು ಕ್ಷೇತ್ರಕ್ಕೂ ಬ್ಯಾಂಕ್ ಉತ್ತೇಜನ ನೀಡುತ್ತಾ ಬಂದಿದ್ದು, ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ ಕಾನ್ಪೆಡರೇಶನ್ಸ್(ಎಐಬಿಒಸಿ)ನ ಅಧ್ಯಕ್ಷ ವೈ.ಸುದರ್ಶನ್ ಮಾತನಾಡಿ, ಈ ಸಮ್ಮೇಳನವು ಬ್ಯಾಂಕಿನ ಅಧಿಕಾರಿಗಳಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದು, ಇಲ್ಲಿ ಚರ್ಚೆಯಾಗುವ ವಿಚಾರಗಳು ಕೂಡ ಅಷ್ಟೇ ಪ್ರಮುಖವಾದುದು. ನೌಕರರ ಹಲವಾರು ಔದ್ಯೋಗಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಮ್ಮೇಳನಗಳಲ್ಲಿ ಭಾಗವಹಿಸುವಿಕೆ ಅತಿ ಅಗತ್ಯ ಎಂದರು.
ಕಾರ್ಪೋರೇಶನ್ ಬ್ಯಾಂಕ್ ಆಫೀಸರ್ ಆರ್ಗನೈಸೇಶನ್ಸ್‌ನ ಉಪಾಧ್ಯಕ್ಷ ಜಿ.ರಘುರಾಮನ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಏಕನಾಥ್ ಬಾಳಿಗಾ ಪ್ರಸ್ತಾವನೆಗೈದರು. ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿ ಕೆ.ಎಸ್.ಕಾರ್ತಿಕ್ ಸ್ವಾಗತಿಸಿ, ಸ್ವಾಗತ ಸಮಿತಿಯ ವಂದಿಸಿದರು.
ಕಾರ್ಯಕ್ರಮದಲ್ಲಿ ಎಐಬಿಒಸಿ ಅಧ್ಯಕ್ಷ ವೈ ಸುದರ್ಶನ್ , ಕಾರ್ಪೋರೇಶನ್ ಬ್ಯಾಂಕ್ ಆಫೀಸರ್ ಆರ್ಗನೈಸೇಶನ್ಸ್‌ನ ಉಪಾಧ್ಯಕ್ಷ ಜಿ.ರಘುರಾಮನ್,ಪ್ರಧಾನ ಕಾರ್ಯದರ್ಶಿ ಏಕನಾಥ್ ಬಾಳಿಗಾ
ಸ್ವಾಗತ ಸಮಿತಿಯ ಅಧ್ಯಕ್ಷ ಜಯಪ್ರಕಾಶ ರಾವ್, ಕಾರ್ಯದರ್ಶಿ ಕೆ.ಎಸ್.ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು.