ಮಂಗಳೂರು,ಜ.22 : ನಗರದ ಖಾಸಗಿ ವಸತಿಗೃಹದಲ್ಲಿ ಖಾಸಗಿ ಕೊಡಗು ಜಿಲ್ಲೆಯ ಖಾಸಗಿ ಪಿ.ಯು. ಕಾಲೇಜು ಪ್ರಾಂಶುಪಾಲರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುರುವಾರ ನಡೆದಿದೆ.
ಆತ್ಯಗತ್ಯೆಗೈದ ವ್ಯಕ್ತಿ ಮೂಲತಃ ಮಂಗಳೂರಿನ ತಲಪಾಡಿ ನಿವಾಸಿ ಸುದೇಶ್ ಕುಮಾರ್ (45) ಎಂದು ಗುರುತಿಸಲಾಗಿದೆ.
ಮಡಿಕೇರಿಯ ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪಿ.ಯು ಕಾಲೇಜಿನಲ್ಲಿನ ಮೇಲ್ವರ್ಗದ ಜಾತಿಯ ಅಧ್ಯಕರು ,ಸದಸ್ಯರು ಸುದೇಶ್ ಅವರಿಗೆ ಕಿರುಕುಳ ನೀಡಿದ ಕಾರಣ ಇವರು ಆತ್ಮಹತ್ಯೆ ಮಾಡಿರುದಾಗಿ ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಎಸ್.ಸಿ.ಮುಗೇರಾ ಜಾತಿಗೆ ಸೇರಿದ ಸುದೇಶ್ ಅವರು ಮುಂಬಡ್ತಿಗೊಂಡು ಮಡಿಕೇರಿಯ ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಕಾಲೇಜಿನ ಪ್ರಿನ್ಸಿಪಾಲ್ ಆಗಿ 2001 ವರ್ಷ ನೇಮಕವಾಗಿದ್ರು, ಆ ಬಳಿಕ ಕಾಲೇಜಿನ ಮೇಲ್ವರ್ಗದ ಜಾತಿಯ ಅಧ್ಯಕರು ,ಸದಸ್ಯರು ಕಿರುಕುಳ ನೀಡಿದ್ದು, ಸುದೇಶ್ ಅವರು ಖಿನ್ನತೆಗೊಳಗಾಗಿದ್ದರು.
ಈ ಬಗ್ಗೆ ಹಲವು ಬಾರಿ ಪತ್ನಿ, ಪತ್ನಿಯ ಸಹೋದರನಿಗೆ ಹಲವು ಬಾರಿ ತಿಳಿಸಿದ್ದರು.ಇದರಿಂದಾಗಿ ನೊಂದ ಅವರನ್ನು ಪತ್ನಿ ಸಮಧಾನಪಡಿಸಿದ್ದು, ಜ. 20ರಂದು ಕಾಲೇಜಿಗೆ ಹೋಗುದಾಗಿ ತಿಳಿಸಿ ಹೊಗಿದ್ದರು.ಆದ್ರೆ ಕಾಲೇಜಿಗೆ ಹೋಗದ ಸುದೇಶ್ ಬಿಜೈ ಬಳಿಯ ಕೀರ್ತಿ ವಸತಿ ಮಹಲ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ.
ಆತ್ಮಹತ್ಯೆ ಮಾಡುವ 2ದಿನಗಳ ಮೊದಲು ಪತ್ನಿನಿಗೆ ಮೆಸೇಜೊಂದನ್ನು ಕಲಿಸಿದ್ದು, ತಾನು ಆತ್ಮಹತ್ಯೆ ಮಾಡುದಾಗಿ ತನ್ನನ್ನು ಕ್ಷಮಿಸುವಂತೆ ಹಾಗೂ ಮಕ್ಕಳನ್ನು ಚೆನ್ನಾಗಿ ನೋಡುವಂತೆ ಮೆಸೇಜ್ ಮಾಡಿದ್ದರು.ಸಾವಿಗೆ ಕಾರಣರಾದ ಮೇಲ್ವರ್ಗದ ಜಾತಿಯ ಅಧ್ಯಕರು ,ಸದಸ್ಯರ ವಿರುಧ್ದ ಕ್ರಮಕೈಗೊಳ್ಳುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.