ಉಳ್ಳಾಲ ,ಜ.16: ಉಳ್ಳಾಲ ಸಯ್ಯಿದ್ ಮದನಿ ದರ್ಗಾ ವತಿಯಿಂದ 2016 ರ ಹಜ್ ಯಾತ್ರೆ ಕೈಗೊಳ್ಳಲಿಚ್ಚಿಸುವವರಿಗೆ ಹಜ್ ಫಾರಂ ವಿತರಣೆ ಕಾರ್ಯಕ್ರಮವು ದರ್ಗಾ ಸನ್ನಿಧಿಯಲ್ಲಿ ನಡೆಯಿತು. ದರ್ಗಾ ಅಧ್ಯಕ್ಷರಾದ ಹಾಜಿ ಯು.ಎಸ್ ಹಂಝರವರು ದರ್ಗಾ ಸಮಿತಿ ಸದಸ್ಯರಾದ ಹನೀಫ್ ಮಾರ್ಗತಲೆಯವರಿಗೆ ನೀಡುವ ಮೂಲಕ ಚಾಲನೆ ನೀಡಿದರು. ಹಜ್ ಯಾತ್ರೆ ಕೈಗೊಳ್ಳಲಿರುವ ಆಕಾಂಕ್ಷಿಗಳು ಹಜ್ ಫಾರಂಗೆ ದರ್ಗಾ ಕಛೇರಿಯನ್ನು ಸಂಪರ್ಕಿಸಿ ಸಹಾಯ ಪಡೆಯಬಹುದೆಂದು ಅಧ್ಯಕ್ಷರು ತಿಳಿಸಿದರು.
ಈ ಸಂದರ್ಭದಲ್ಲಿ ಹಜ್‌ಗೈಡನ್ನು ದ.ಕ ಜಿಲ್ಲಾವಕ್ಫ್ ಸದಸ್ಯರಾದ ಹನೀಫ್ ಹಾಜಿಯವರು ದರ್ಗಾ ಅಧ್ಯಕ್ಷರಾದ ಹಾಜಿ ಯು.ಎಸ್ ಹಂಝರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಯು.ಟಿ ಇಲ್ಯಾಸ್, ಜತೆ ಕಾರ್ಯದರ್ಶಿ ಫಾರೂಕ್ ಮಾರ್ಗತಲೆ, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಝಿಯಾದ್ ತಂಙಳ್, ಚಾರೀಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ಕಾರ್ಯದರ್ಶಿ ಫಾರೂಕ್ ಕೋಡಿ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.