ಕನ್ನಡ ವಾರ್ತೆಗಳು

ಕುಂದಾಪುರ: ಪ್ರೀತಿಯ ನೆಪವೊಡ್ಡಿ, ಬೆದರಿಸಿ 13ರ ಬಾಲೆಯ ಅತ್ಯಾಚಾರ; ಆರೋಪಿ ಬಂಧನ

Pinterest LinkedIn Tumblr

ಕುಂದಾಪುರ: ಮನೆ ಸಮೀಪದ 13 ವರ್ಷದ ಬಾಲಕಿಯೋರ್ವಳನ್ನು ಪ್ರೀತಿ-ಪ್ರೇಮದ ನೆಪವೊಡ್ಡಿದ್ದಲ್ಲದೇ ಬೆದರಿಕೆ ಹಾಕುವ ಮೂಲಕ ಐದು ತಿಂಗಳುಗಳಿಂದ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಾಲಕಿ ತಂದೆ ನೀಡಿದ ದೂರಿನನ್ವಯ ಕುಂದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Kndpr_Rape Case_arrest

ಕುಂದಾಪುರ ತಾಲೂಕಿನ ಬಳ್ಕೂರು ಆಸುಪಾಸಿನ ನಿವಾಸಿಯಾಗಿರುವ ಗಜೇಂದ್ರ ಪೂಜಾರಿ(28) ಎಂಬಾತನೇ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದು ಸದ್ಯ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಕೂರು ಸಮೀಪದ ಕಾರ್ಖಾನೆಯೊಂದರಲ್ಲಿ ಜೆ.ಸಿ.ಬಿ. ಚಾಲಕನಾಗಿದ್ದ ಗಜೇಂದ್ರ ಪೂಜಾರಿ ಮನೆ ಸಮೀಪದ 13 ವರ್ಷ ಪ್ರಾಯದ ಏಳನೇ ತರಗತಿ ಓದುತ್ತಿರುವ ಯುವತಿಯೋರ್ವಳನ್ನು ಐದು ತಿಂಗಳುಗಳಿಂದ ಪ್ರೀತಿಸುವ ಬೆದರಿಕೆ ಹಾಗೂ ಮನೆಯವರಿಗೆ ತಿಳಿಸಿದರೇ ಕೊಲ್ಲುವ ಬೆದರಿಕೆಯನ್ನು ಹಾಕಿ ಅತ್ಯಾಚಾರ ನಡೆಸುತ್ತಿದ್ದ. ಅಲ್ಲದೇ ಆಕೆ ಮನೆಯ ಮೊಬೈಲಿಗೂ ವಿವಿಧ ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ಗುರುವಾರ ತಡರಾತ್ರಿ ಬಾಲಕಿ ತಂದೆ ಎಚ್ಚರಗೊಂಡಾಗ ಬಾಲಕಿ ಮನೆಯೊಳಗಿರದನ್ನು ಗಮನಿಸಿ ಹೊರಗಡೆ ಬಂದಾಗ ಆರೋಪಿ ಗಜೇಂದ್ರ ಪೂಜಾರಿ ಬಾಲಕಿಯೊಂದಿಗೆ ಇದ್ದ ಎನ್ನಲಾಗಿದೆ. ಬಳಿಕ ವಿಚಾರಿಸಿದಾಗ ಬಾಲಕಿ ಸತ್ಯಾಂಶವನ್ನು ತಿಳಿಸಿದ್ದು ಆರೋಪಿ ಗಜೇಂದ್ರ ತನ್ನನ್ನು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ನಡೆಸಿರುವುದಾಗಿಯೂ ತಿಳಿಸಿದ್ದಾಳೆ.

ಬಾಲಕಿಯ ತಂದೆ ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಕುಂದಾಪುರ ವೃತ್ತನಿರೀಕ್ಷಕ ದಿವಾಕರ್ ಪಿ.ಎಂ. ಹಾಗೂ ಎಸ್.ಐ. ನಾಸೀರ್ ಹುಸೇನ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Write A Comment