ಉಡುಪಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಾವು ಶೋಭಾ ಕರಂದ್ಲಾಜೆ ಅವರನ್ನು ಮದುವೆಯಾಗಿಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ, ನಾನು ಆವತ್ತೇ ರಾಜಕೀಯದಿಂದ ನಿವೖತ್ತನಾಗುತ್ತೇನೆ ಎಂದು ಕರ್ನಾಟಕ ಜನತಾ ಪಕ್ಷದ ಸಂಸ್ಥಾಪಕ ರಾಜ್ಯಾದ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಸವಾಲು ಹಾಕಿದ್ದಾರೆ.
ಅವರಿಬ್ಬರೂ ಮದುವೆಯಾಗಿರುವ ಸಿ.ಡಿ. ನನ್ನ ಬಳಿ ಇದೆ. ಸರ್ಕಾರ ನನಗೆ ಝಡ್ ಪ್ಲಸ್ ರಕ್ಷಣೆ ಕೊಡಲಿ, ತಕ್ಷಣ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಕರ್ನಾಟಕ ಜನತಾ ಪಕ್ಷದ ಸಂಸ್ಥಾಪಕ ರಾಜ್ಯಾದ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಘೋಷಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಶೋಭಾ ಅವರು ಮದುವೆಯಾದುದರ ಬಗ್ಗೆ ತಮಗೇನೂ ಅಭ್ಯಂತರ ಇಲ್ಲ,ಮೊದಲು ಕೇರಳದಲ್ಲಿ ಮದುವೆಯಾದ ಅವರು ಜ್ಯೋತಿಷಿಗಳ ಸಲಹೆ ಮೇರೆಗೆ ತಿರುಪತಿಯಲ್ಲಿ ಮದುವೆಯಾಗಿದ್ದಾರೆ. ಎರಡೆರಡು ಬಾರಿ ಮದುವೆಯಾಗಿದ್ದರೂ ಇನ್ನೂ ಅದನ್ನು ಮುಚ್ಚಿಡುವ ಅಗತ್ಯ ಇಲ್ಲ, ಅದಕ್ಕೆ ಸಾಕ್ಷ್ಯಗಳಿರುವುದರಿಂದ, ಅವರು ತಮ್ಮ ಮದುವೆಯನ್ನು ಬಹಿರಂಗಗೊಳಿಸಲಿ ಎಂದು ಹೇಳಿದರು.
ತಮಗೆ ಬೀವಬೆದರಿಕೆ ಇದೆ, ತಾನು ಈ ಸಿ.ಡಿ.ಯನ್ನು ಬಹಿರಂಗಗೊಳಿಸಿದರೇ ಜೀವಕ್ಕೆ ಕುತ್ತು ಬರಬಹುದು. ಆದ್ದರಿಂದ ಇದುವರೆಗೂ ಸಿ.ಡಿ.ಬಿಡುಗಡೆ ಮಾಡುವುದಕ್ಕಾಗಿಲ್ಲ ಎಂದು ಅವರು ತಮ್ಮನ್ನು ಸಮರ್ಥಿಸಿಕೊಂಡರು. ಈ ಹಿಂದೆಯೂ ನನ್ನ ಮನೆಯಿಂದಲೇ ಕಿಡ್ನಾಪ್ ಮಾಡಲಾಗಿತ್ತು ಎಂದು ಆರೋಪಿಸಿದರು.
ಸಂಸದೀಯ ಕಾರ್ಯದರ್ಶಿ ನೇಮಕದಲ್ಲಿ ಭ್ರಷ್ಟಾಚಾರ:
ಸಿದ್ದರಾಮಯ್ಯನವರ ಸರಕಾರದಲ್ಲಿ ಹನ್ನೊಂದು ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಂಡಿದ್ದು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು ರಾಜ್ಯದಲ್ಲಿ 34 ಸಚಿವರಿರಬೇಕಾಗಿದ್ದು ಸದ್ಯ ಸಚಿವರ ಸಂಖ್ಯೆ 45ಕ್ಕೇ ಏರಿದೆ. ಇದು ಅಸಾಂವಿಧಾನಿಕವಾಗಿದ್ದು, ದುಂದುವೆಚ್ಚವಾಗುತ್ತಿದೆ ಎಂದರು.