
ಮಂಗಳೂರು,ಜ.14: ಜಿಲ್ಲೆಯಾದ್ಯಂತ ನಡೆದ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಕಳವು ಪ್ರಕರಣಗಳ ಸೊತ್ತುಗಳನ್ನು ನ್ಯಾಯಾಲಯದ ಆದೇಶದಂತೆ ಎಸ್ಪಿ ಡಾ.ಶರಣಪ್ಪ ಅವರ ನೇತೃತ್ವದಲ್ಲಿ ಗುರುವಾರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
2015ರಲ್ಲಿ ನಡೆದ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳಿಂದ 61 ಲಕ್ಷ ರೂ. ಮೌಲ್ಯದ ಸುತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಚಿನ್ನಾಭರಣ, ವಾಹನಗಳು, ನಗದು, ಪೂಜಾ ಸಾಮಗ್ರಿಗಳು, ರಬ್ಬರ್, ಅಡಿಕೆ ಸೇರಿದಂತೆ ಇಂದು 55 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಾರಸುದಾರರಿಗೆ ಎಸ್ಪಿ ಡಾ.ಶರಣಪ್ಪ ಅವರು ಹಸ್ತಾಂತರಿಸಿದರು.

ಎಸ್ಪಿ ಸುಬ್ರಹ್ಮಣ್ಯೇಶ್ವರ ರಾವ್ ಹಾಗೂ ಐಜಿಪಿ ಗೋಪಾಲ್ ಹೊಸೂರು ಅವರು 6 ವರ್ಷಗಳ ಹಿಂದೆ ಕಳವು ಸಾಮಗ್ರಿಗಳನ್ನು ನ್ಯಾಯಾಲಯದ ಆದೇಶದಂತೆ ವಾರಸುದಾರರಿಗೆ ಹಸ್ತಾಂತರಿಸಿದ್ದರು. ಇದೀಗ ಆರು ವರ್ಷಗಳ ಬಳಿಕ ಎಸ್ಪಿ ಡಾ.ಶರಣಪ್ಪ ನೇತೃತ್ವದಲ್ಲಿ ದ.ಕ. ಜಿಲ್ಲಾದ್ಯಂತ 2015ರಲ್ಲಿ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಎಲ್ಲಾ ಕಳವು ಪ್ರಕರಣಗಳ ಸೊತ್ತುಗಳನ್ನು ಹಸ್ತಾಂತರ ಮಾಡಲಾಯಿತು.