ಕನ್ನಡ ವಾರ್ತೆಗಳು

ರಾಷ್ಟ್ರೀಯ ಬಂಟ ಮಹಾಸಮ್ಮೇಳನ 2016 – ಉದ್ಘಾಟನೆಗೆ ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ 

Pinterest LinkedIn Tumblr

Bunts_welfr_hegade

ಮಂಗಳೂರು,ಜ. 13: ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಆಶ್ರಯದಲ್ಲಿ ಫೆಬ್ರವರಿ 6 ಮತ್ತು 7 ರಂದು ನಗರದ ಪುರಭವನದಲ್ಲಿ ಜರಗಲಿರುವ ‘ರಾಷ್ಟ್ರೀಯ ಬಂಟ ಮಹಾಸಮ್ಮೇಳನ’ದ ಉದ್ಘಾಟಕರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸುವರೆಂದು ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ತಿಳಿಸಿದ್ದಾರೆ.

ಫೆಬ್ರವರಿ 6 ರಂದು ಅಪರಾಹ್ನ ಸಮ್ಮೇಳನಾಧ್ಯಕ್ಷ ಡಾ. ಡಿ.ಕೆ ಚೌಟ ಅವರ ಮೆರವಣಿಗೆಯೊಂದಿಗೆ ಪುರಭವನದಲ್ಲಿ ಜರಗುವ ಸಂತ ಸಮಾವೇಶದಲ್ಲಿ ವಿವಿಧ ಸಂಸ್ಥಾನಗಳ ಪ್ರಮುಖರು ಪಾಲ್ಗೊಳ್ಳುವರು. ಸಾಯಂಕಾಲ ಗಂಟೆ 5.00ಕ್ಕೆ ಸಮ್ಮೇಳನದ ವಿಧ್ಯುಕ್ತ ಉದ್ಘಾಟನೆ ಮತ್ತು ಟ್ರಸ್ಟ್‌ನ ಮುಖವಾಣಿ ‘ಸದಾಶಯ’ ತ್ರೈಮಾಸಿಕ ಚೊಚ್ಚಲ ಸಂಚಿಕೆ ಬಿಡುಗಡೆಗೊಳ್ಳುವುದು.
ಗೋಷ್ಠಿಗಳು: ಸಮ್ಮೇಳನದ ಎರಡನೆಯ ದಿನ ಫೆ. 7 ರಂದು ‘ಸಾಮಾಜಿಕ ಸ್ಥಿತ್ಯಂತರದಲ್ಲಿ ಬಂಟರು’ ಎಂಬ ವಿಚಾರ ಗೋಷ್ಠಿಯಲ್ಲಿ ಸಮಾಜದ ಪ್ರಮುಖ ಚಿಂತಕರು ವಿವಿಧ ವಿಷಯಗಳ ಮೇಲೆ ಮಾತನಾಡುವರು. ಅಂದು ಅಪರಾಹ್ನ ‘ಕಾವ್ಯ ಚಿತ್ತಾರ’ ಎಂಬ ವಿಭಿನ್ನ ಕವಿ ಮೇಳವನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಹೆಸರಾಂತ ಕವಿಗಳ ಕಾವ್ಯಲಹರಿಯೊಂದಿಗೆ ‘ಗಾನ-ಕುಂಚ-ನೃತ್ಯ’ಗಳನ್ನು ಆಯೋಜಿಸಲಾಗಿದೆ.

ಉಳಿದಂತೆ ಮಹಿಳಾ ಸಮಾವೇಶ, ಬಂಟ ಕಲಾ ಸಂಪದ, ತಾರಾಮೇಳ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು, ಸಮ್ಮೇಳನದಲ್ಲಿ ನಾಡು-ಹೊರನಾಡುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭಾಗವಹಿಸುವರೆಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

Write A Comment