ಕನ್ನಡ ವಾರ್ತೆಗಳು

ಕ್ರೀಮ್ ಕ್ಯಾರಾಮಲ್ ಮೇಲೆ ಧಿಡೀರ್ ದಾಳಿ: ಬಾಲ ಕಾರ್ಮಿಕರ ರಕ್ಷಣೆ.

Pinterest LinkedIn Tumblr

Carmal_raid_photo_1

ಮಂಗಳೂರು,ಜ.13: ನಗರದ ಆರ್ಯ ಸಮಾಜ ರಸ್ತೆಯಲ್ಲಿನ ಕ್ರೀಮ್ ಕ್ಯಾರಾಮಲ್ ಬೇಕರ್ ಗೆ ಬುಧವಾರ ಧೀಡಿರ್ ಧಾಳಿ ನಡೆಸಿ ಒಡಿಸ್ಸಾ ಮೂಲದ ನಾಲ್ಕು ಹುಡುಗಿಯರನ್ನು ರಕ್ಷಿಸ್ಪಲ್ಟಿದೆ.

ಬೇಕರಿಯಲ್ಲಿ “ಮಾನವ ಕಳ್ಳಸಾಗಣೆ” ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ ಯ ಕಾರ್ಯಕರ್ತೆ ವಿಧ್ಯಾದಿನಕರ್ ನೇತೃತ್ವದೊಂದಿಗೆ ಚೈಲ್ಡ್ ಲೈನ್ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕ್ರೀಮ್ ಕ್ಯಾರಾಮಲ್ ಬೇಕರ್ ಮೇಲೆ ದಾಳಿ ನಡೆಸಿದ್ದಾರೆ

Carmal_raid_photo_2 Carmal_raid_photo_3 Carmal_raid_photo_4

ಈ ಕ್ರೀಮ್ ಕ್ಯಾರಮಲ್ ಸಂಸ್ಥೆಯು ಪ್ರೇಮರಾಜ್ ಶೆಟ್ಟಿ ಮತ್ತು ಡೆಂಜಿಲ್ ಫೆರ್ನಾಂಡಿಸ್ ಮಾಲಿಕರ ಒಡೆತನದಲ್ಲಿದ್ದು, ದಾಳಿ ಸಂಧರ್ಭದಲ್ಲಿ ನಾಲ್ಕು ಹೆಣ್ಮಕ್ಕಳಲ್ಲಿ ಮೂವರು (17 ವ) ಈ ಸಂಸ್ಥೆಯಲ್ಲಿ ಆಡಿಗೆ ಕೆಲಸಕ್ಕೆ ಹಾಗೂ (12 ವ) ಇನ್ನೊಂದು ಹುಡುಗಿಯನ್ನು ಸಂಸ್ಥೆಯ ಮಾಲಕರ ಮನೆ ಕೆಲಸಕ್ಕೆ ನೇಮಿಸಲಾಗಿದೆ ಎಂದು ತಿಳಿದು ಬಂದಿದೆ. ಇವರೆಲ್ಲರನ್ನೂ ಒಡಿಸ್ಸಾದಿಂದ ಇಲ್ಲಿಗೆ ಕರೆತರಲಾಗಿದ್ದು, ಊಟಕ್ಕೂ ಸಮಯ ನೀಡಿದೆ ನಿರತರ ಕೆಲಸ ಮಾಡಿಸುತ್ತಿದ್ದಾರೆ. ಎಂದು ಈ ಸಂಧರ್ಭದಲ್ಲಿ ಅವರು ಬಹಿರಂಗ ಗೊಳಿಸಿದ್ದರು.

ಮಕ್ಕಳಿಗೆ ಕೆಲಸ ತಕ್ಕಂತೆ ಸರಿಯಾದ ರೀತಿಯ ಸಂಬಳವೂ ನೀಡದೆ ,ಹೋರಗೂ ಹೋಗಕ್ಕೆ ಬಿಡದೆ. ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ನೀಡದೆ ಹಿಂಸೆ ನೀಡಲಾಗುತ್ತಿದೆ ಎಂದು ಇವರು ಅಪಾದಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಿರಿ……

Write A Comment