ಕನ್ನಡ ವಾರ್ತೆಗಳು

ಕಡಲ ತೀರದಲ್ಲಿ ಪೊಲೀಸರಿಂದ `ಬೀಚ್ ವಾಕ್ ಆ್ಯಂಡ್ ರನ್’

Pinterest LinkedIn Tumblr

police_beach_walk_1

ಮಂಗಳೂರು, ಜ.10 : ಪೊಲೀಸ್ ಸಿಬ್ಬಂದಿಗಳ ದೈಹಿಕ ಕ್ಷಮತೆ ಹೆಚ್ಚಿಸುವತ್ತ ಗಮನಹರಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶರಣಪ್ಪ ಎಸ್.ಡಿ, ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಬಾರಿ ವಾರದ ಮಾಮೂಲಿ ಕವಾಯತಿಗೆ ಬದಲಾಗಿ `ಬೀಚ್ ವಾಕ್ ಆ್ಯಂಡ್ ರನ್’ ಎಂಬ ಕಾರ್ಯಕ್ರಮವನ್ನು ಪಣಂಬೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಅಧಿಕಾರಿಗಳು, ಸಿಬ್ಬಂದಿಗಳು `ಬೀಚ್ ವಾಕ್ ಆ್ಯಂಡ್ ರನ್’ ಅಂಗವಾಗಿ ನಗರದ ಪಣಂಬೂರಿನ ಕುದುರೆಮುಖ ಜಂಕ್ಷನ್‍ನಿಂದ ತಣ್ಣೀರು ಬಾವಿವರೆಗಿನ ಸುಮಾರು 7 ಕಿ.ಮೀ ದೂರದ ವರೆಗೆ ಓಟ, ನಡಿಗೆ ಹಮ್ಮಿಕೊಂಡರು. ಬಳಿಕ ಶಾರೀರಿಕ ವ್ಯಾಯಾಮ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

police_beach_walk_2 police_beach_walk_3 police_beach_walk_4 police_beach_walk_5 police_beach_walk_6 police_beach_walk_7 police_beach_walk_8

ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಈ ವಿನೂತನ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

Write A Comment