ಕನ್ನಡ ವಾರ್ತೆಗಳು

ಅನಾಥಶ್ರಮದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ.

Pinterest LinkedIn Tumblr

ladygosh_rape_lady

ಮಂಗಳೂರು,ಜ.07 : ಅನಾಥಶ್ರಮದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೇದ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಕೇರಳದ ಪಯ್ಯನೂರಿನ ಅನಾಥಾಶ್ರಮಕ್ಕೆ ಹರ್ಯಾಣ ಮೂಲದ ಯುವಯೊಬ್ಬಳು ಸೇರಿದವಳೆನ್ನಲಾಗಿದೆ ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಕಳೆದ ರಾತ್ರಿ ಪುತ್ತೂರಿನಲ್ಲಿ ವರದಿಯಾಗಿದೆ.

ಪುತ್ತೂರಿನ ಹಾರಾಡಿ ರೈಲ್ವೆ ಸೇತುವೆ ಬಳಿ ಯುವತಿಯೊಬ್ಬಳು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಸ್ಥಳೀಯರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆಕೆಯನ್ನು ವೈದ್ಯರು ತಪಾಸಣೆ ನಡೆಸುವಾಗ ತನ್ನ ಮೇಲೆ ಕೇರಲಾ ಫೋಲೀಸರು ಸಾಮೂಹಿಕ ಅತ್ಯಾಚಾರ ಮಾಡಿರುವ ಕುರಿತು ಮಾಹಿತಿಯನ್ನು ವೈದರಿಗೆ ಆಕೆ ನೀಡಿದ್ದಾಳೆ ಹೀಗಾಗಿ ತಕ್ಷಣವೇ ಆಕೆಯನ್ನು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 108 ಆ್ಯಂಬುಲೆನ್ಸ್ ನಲ್ಲಿ ಆಕೆಯನ್ನು ಕರೆ ತಂದು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಆದರೆ ಮಂಗಳೂರಿನಲ್ಲಿ ವೈದ್ಯರು ಆಕೆಯ ತಪಾಸಣೆಗೆ ಮುಂದಾದಾಗ ಆಕೆ ಚಿಕಿತ್ಸೆಗೆ ಸ್ಫಂದಿಸಲು ನಿರಾಕರಿಸಿದ್ದಾಳೆ. ಮಾನಸಿಕ ಖಿನ್ನತೆಗೊಳಗಾಗಿದ್ದ ಯುವತಿಯು ಚಿಕಿತ್ಸೆ ಪಡೆಯದೆನೇ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾಳೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಯುವತಿ ಪರಾರಿಯಾಗಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹರ್ಯಾಣ ಮೂಲದವಳೆನ್ನಲಾದ ಈ ಯುವತಿಯ ಮೇಲೆ ಚಲಿಸುತ್ತಿರುವ ರೈಲಿನಲ್ಲಿ ಅತ್ಯಾಚಾರ ನಡೆಯಿತೋ ಅಥವಾ ಅನಾಥಾಶ್ರಮದಲ್ಲಿ ನಡೆಯಿತೋ ಎಂಬುದು ನಿಗೂಢವಾಗಿದೆ

Write A Comment