ಕನ್ನಡ ವಾರ್ತೆಗಳು

ಫೆರಿ ಬಂದರಿನ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಶಾಸಕ ಐವನ್ ಡಿ’ಸೋಜಾ ಸೂಚನೆ

Pinterest LinkedIn Tumblr

ivan_in_lc

ಮಂಗಳೂರು, ಜ.5: ನಗರದ ಬೆಂಗ್ರೆ ಫೆರಿ ಬಂದರಿನ ಕಾಮಗಾರಿಗಳನ್ನು ಶೀಘ್ರವೇ ಮುಕ್ತಾಯಗೊಳಿಸುವಂತೆ ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

ಬೆಂಗ್ರೆ ಫೆರಿ ಬಂದರಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ಅವರು, ಕಾಮಗಾರಿಯ ಗುಣಮಟ್ಟ ಕಾಪಾಡುವ ಜೊತೆಗೆ ಬೆಂಗ್ರೆ ಕಸಬಕ್ಕೆ ಕೊಂಡಿಯಾಗಿರುವ ಈ ಫೆರಿ ಕಾಮಗಾರಿಯನ್ನು ಕೂಡಲೇ ಮಕ್ತಾಯಗೊಳಿಸಿ ಅನುಕೂಲ ಮಾಡಿಕೊಡುವಂತೆ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರಿಗೆ ತಿಳಿಸಿದರು.

ಈ ಪ್ರದೇಶದಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಬಂದರು ಇಲಾಖೆಯಿಂದ ಫೆರಿ ದಾಟಲು ಮಿನಿ ಬಂದರು ನಿರ್ಮಾಣದ ಕಾಮಗಾರಿಯನ್ನೂ ತುರ್ತಾಗಿ ನಡೆಸಿ ಸಾರ್ವಜನಿಕ ಉಪಯೋಗಕ್ಕೆ ನೀಡುವಂತೆ ಅವರು ಇಲಾಖಾ ಅಧಿಕಾರಿಗಳಿಗೆ ಹೇಳಿದರು. ಈ ಸಂದರ್ಭದಲ್ಲಿ ಸ್ಥಳೀಯರ ಬೇಡಿಕೆಯಾದ ರಿಕ್ಷಾ ನಿಲ್ದಾಣದ ಸ್ಥಳವನ್ನು ಐವನ್ ಪರಿಶೀಲಿಸಿದರು. ಬೆಂಗ್ರೆ ಜಮಾತ್ ಅಧ್ಯಕ್ಷ ಹಾಜಿ ಬಿ. ಹಸನ್, ಬಿಲಾಲ್ ಮೊಯಿದ್ದೀನ್, ಅಫ್ರರ್ ಆಲಿ, ಫಯಾಜ್ ಇಬ್ರಾಹಿಂ ಮುಂತಾದವರು ಈ ವೇಳೆ ಜೊತೆಗಿದ್ದರು.

Write A Comment