ಕನ್ನಡ ವಾರ್ತೆಗಳು

ಪಬ್ ಗಲಾಟೆ : ಬೌನ್ಸರ್ ,ಗನ್ ಮ್ಯಾನ್, ಮಾಲಕನ ವಿರುದ್ಧ ದೂರು ದಾಖಲು

Pinterest LinkedIn Tumblr

Pub_fight_photo

ಮಂಗಳೂರು,ಜ.04:  ನಗರದ ಎಂ.ಜಿ ರಸ್ತೆಯ ಎಂಪೈರ್ ಮಾಲ್ ನ ಪಬ್ ನಲ್ಲಿ ಡಿ.31ರಂದು ರಾತ್ರಿ ಗಲಾಟೆ ನಡೆದಿದ್ದು, ಬೌನ್ಸರ್, ಗನ್ ಮೇನ್ ಹಾಗೂ ಪಬ್ ಮಾಲಕರ ವಿರುದ್ಧ ಯುವಕನೋರ್ವ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಹಲ್ಲೆಗೊಳಗಾದ ಯುವಕ ಸ್ಟೀಫನ್ ಎಡ್ವಿನ್ ನಝ್ರತ್ ಎಂದು ಗುರುತಿಸಲಾಗಿದ್ದು, ಈತ ನಗರದ ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಯ ವಿವರ:

ಡಿ.31ರಂದು ರಾತ್ರಿ ಸುಮಾರು 1:30ರ ವೇಳೆಗೆ ನಗರದ ಎಂಪೈರ್ ಮಾಲ್ ನ ಪಬ್ ಗೆ ಸ್ಟೀಫನ್ ಪಾರ್ಸೆಲ್ ತೆಗೆದುಕೊಳ್ಳಲು ಬಂದಿದ್ದು, ಈ ಸಂದರ್ಭ ಪಬ್ ನ ಬೌನ್ಸರ್ ಪಾರ್ಟಿ ನಡೆಯುತ್ತಿದೆ, ಇಲ್ಲಿಂದ ಹೊರಗೆ ಹೋಗುವಂತೆ ಸೂಚಿಸಿದ್ದು, ಈ ವೇಳೆ ಸ್ಟೀಫನ್ ಹೊರಗೆ ಹೋಗಲು ನಿರಾಕರಿಸಿದ ನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೋಪಗೊಂಡ  ಬೌನ್ಸರ್ ಸ್ಟೀಫನ್ ನನ್ನು ಹೊರತಳ್ಳಿದ್ದು, ಈ ವೇಳೆ ಪಬ್ ಮಾಲಕ  ಗನ್ ಮೇನ್ ಸ್ಟೀಫನ್ ನ ತಲೆಗೆ ಗನ್ ನಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಪಬ್ ಮಾಲಕ ಲಿಫ್ಟ್ ನೊಳಗೆ ದೂಡಿ ಹಾಕಿದ್ದಾರೆಂದು ಗಾಯಾಳು ಆರೋಪಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪಬ್ ಮಾಲಕ ನಾನು ಯಾರಿಗೂ ಹಲ್ಲೆ ನಡೆಸಿಲ್ಲ, ಸ್ಟೀಫನ್ ಎಂಬಾತ ಮಾಲ್ ನೊಳಗೆ ಕುಡಿದು ಚಿತ್ತಾಗಿ ಬಂದಿದ್ದು, ಈ ವೇಳೆ ಬೌನ್ಸರ್ ಗೆ ಅವಾಚ್ಯವಾಗಿ ಬೈದಿದ್ದಾನೆ. ಈ ಸಂದರ್ಭ ಬೌನ್ಸರ್ ಹಲ್ಲೆ ನಡೆಸಿರುವುದು ನಿಜ. ಆದರೆ ಡಿ.31ರಂದು ಈ ಘಟನೆ ನಡೆಸಿದ್ದರೂ ತಡವಾಗಿ ಕೇಸು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Write A Comment