ಕನ್ನಡ ವಾರ್ತೆಗಳು

ಪೇಜಾವರ ಸ್ವಾಮೀಜಿಗೆ ಪೌರ ಸಂಮಾನ

Pinterest LinkedIn Tumblr

Pejavar_paurasanmana_1

ಮಂಗಳೂರು :ಮಂಗಳೂರು ನಗರ ಪಾಲಿಕೆ ಹಾಗೂ ಪೌರ ಸಂಮಾನ ಸಮಿತಿ ವತಿಯಿಂದ ಉಡುಪಿ ಪರ್ಯಾಯ ಸರ್ವಜ್ಞ ಪೀಠಾರೋಹಣಗೈಯಲಿರುವ ಪೇಜಾವರ ಮಠಾಧೀಶರಾದ ವಿಶ್ವೇಶ್ವರ ತೀರ್ಥರಿಗೆ ಪೌರ ಸಂಮಾನ ಕಾರ್ಯಕ್ರಮ ರವಿವಾರ ನಗರದ ಪುರಭವನದಲ್ಲಿ ನಡೆಯಿತು ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ ಅವರು ಪೌರ ಸನ್ಮಾನ ನಡೆಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರೋ. ಎಂ.ಬಿ. ಪುರಾಣಿಕ್ ಅವರು,ಡಿ ಪೇಜಾವರ ಶ್ರೀಗಳು ಸರಳ ಜೀವನ ನಡೆಸುವವರಾಗಿದ್ದು, ಮಧ್ವ ಮತವನ್ನು ಜಗತ್ತಿಗೆ ಸಾರಿದವರಾಗಿದ್ದಾರೆ. ಸ್ವಂತಕ್ಕೆ ಶೂನ್ಯ ಸಮಾಜಕ್ಕೆ ಎಲ್ಲವನ್ನು ಸಲ್ಲಿಸಿರುವ ಸ್ವಾಮೀಜಿಯವರು ನಮ್ಮ ನಾಡಿನಲ್ಲಿ ನೂರಾರು ಕಾಲ ಬದುಕಲಿ. ಸಮಾಜದ ರಕ್ಷಣೆಗಾಗಿ ಭಗವಂತ ಅವರಿಗೆ ದೀರ್ಘಾಯುಷ್ಯ ನೀಡಲಿ ಎಂದು ಹೇಳಿದರು.

Pejavar_paurasanmana_2 Pejavar_paurasanmana_3 Pejavar_paurasanmana_4 Pejavar_paurasanmana_5 Pejavar_paurasanmana_6 Pejavar_paurasanmana_7 Pejavar_paurasanmana_8 Pejavar_paurasanmana_9 Pejavar_paurasanmana_10 Pejavar_paurasanmana_11 Pejavar_paurasanmana_12 Pejavar_paurasanmana_13 Pejavar_paurasanmana_14 Pejavar_paurasanmana_15 Pejavar_paurasanmana_16 Pejavar_paurasanmana_17 Pejavar_paurasanmana_18 Pejavar_paurasanmana_19

ಕಾರ್ಯಕ್ರಮದಲ್ಲಿ ಜಿತಕಾಮನಂದಾಜಿ ಸ್ವಾಮೀಜಿ, ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಜೆ.ಆರ್.ಲೋಬೊ, ಸಚಿವ ಅಭಯಚಂದ್ರ ಜೈನ್, ಶಾಸಕ ಮೊಯ್ದಿನ್ ಬಾವಾ, ಐವನ್ ಡಿಸೋಜ, ಬಿ.ನಾಗರಾಜ ಶೆಟ್ಟಿ, ಎಸ್.ಗಣೇಶ್ ರಾವ್, ಎ.ಜೆ.ಶೆಟ್ಟಿ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಧರ್ಮದರ್ಶಿಕ್ಷ ಹರಿಕೃಷ್ಣ ಪುನಾರೂರು, ಪಾಲಿಕೆ ಅಯುಕ್ತ ಗೋಪಾಲಕೃಷ್ಣ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮನಪಾ ಸದಸ್ಯ ಸುಧೀರ್ ಕಣ್ಣೂರ್ ಮತ್ತಿತರರು ಉಪಸ್ಥಿತರಿದ್ದರು.

Write A Comment