
ಮಂಗಳೂರು,ಡಿ.28 :ಪಿಲಿಕುಳ ಹಬ್ಬ’ ದ ಪ್ರಯುಕ್ತ ನಿಸರ್ಗ ಫೌಂಡೇಶನ್‌ನ ಸಹಯೋಗದಲ್ಲಿ ಮಕ್ಕಳಿಗಾಗಿ ‘ಡಿಂಕಿ ಐಸ್‌ಕ್ರೀಂ’ ತಿನ್ನುವ ಸ್ಪರ್ಧೆಯು (Dinky Ice Cream Eating Competition) ಭಾನುವಾರ ನಡೆಯಿತು.
ಪಿಲಿಕುಳ ಅರ್ಬನ್ ಹಾಥ್ ನಲ್ಲಿ ನಡೆದ ಸ್ಪರ್ಧೆತ್ಯಲ್ಲಿ 5 ರಿಂದ 12 ವರ್ಷದ ಒಳಗಿನ ಮಕ್ಕಳು ಬಹಳ ಸಂತೋಷ ಸಂಭ್ರಮದಿಂದ ಭಾಗವಹಿಸಿದರು ಎಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರಭಾಕರ್ ಶರ್ಮಾ ಹೇಳಿದರು.

ಬೆಂಕಿ ರಹಿತ ಅಡುಗೆ ಸ್ಪರ್ಧೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯಾಹ್ನ 2.00 ರಿಂದ ಪ್ರಾರಂಭಗೊಂಡಿದ್ದು, ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಈ ಕಾರ್ಯಕ್ರಮಗಳು ನಡೆಯಿತು.