ಕನ್ನಡ ವಾರ್ತೆಗಳು

ಚುನಾವಣೆ ಹಿನ್ನೆಲೆ: ಮದ್ಯ ಮಾರಾಟ ನಿಷೇಧ

Pinterest LinkedIn Tumblr

liquor_ban_pic

ಮಂಗಳೂರು,ಡಿ.25:ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಡಿ.25ರಿಂದ 27 ಮತ್ತು ಡಿ.29, 30ರಂದು ಮದ್ಯ ಮುಕ್ತದಿನವೆಂದು ಘೋಷಿಸಿ ಮದ್ಯ ಮಾರಾಟಕ್ಕೆ ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ನಿಷೇಧ ಹೇರಿದ್ದಾರೆ.

ಡಿ.27ರಂದು ಮತದಾನ ಹಾಗೂ ಡಿ.30ರಂದು ಮತ ಎಣಿಕೆ ಇರುವುದರಿಂದ ಮತದಾನವು ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಯಬೇಕು ಎಂಬ ಹಿನ್ನೆಲೆಯಲ್ಲಿ ಮದ್ಯಮಾರಾಟಕ್ಕೆ ನಿಷೇಧವನ್ನು ಹೇರಲಾಗಿದೆ.

ಡಿ.25ರಂದು ಸಂಜೆ 4ಗಂಟೆಯಿಂದ27ರ ಸಂಜೆ 4 ಗಂಟೆಯವರೆಗೆ ಮತ್ತು ಡಿ.29 ಮಧ್ಯರಾತ್ರಿಯಿಂದ 30ರ ಮಧ್ಯರಾತ್ರಿಯವರೆಗೆ ನಿಷೇಧವನ್ನು ಹೇರಲಾಗಿದ್ದು, ಮದ್ಯ ಮಾರಾಟ ಪರವಾನಿಗೆ ಇರುವ ಅಂಗಡಿಗಳನ್ನು ಮತ್ತು ಮದ್ಯ ಮಾರಾಟ ಕೇಂದ್ರವನ್ನು ಮುಚ್ಚಲು ಆದೇಶಿಸಿದ್ದಾರೆ.
ಕೃಪೆ : ವಾಭಾ

Write A Comment