ಕನ್ನಡ ವಾರ್ತೆಗಳು

ರಾಷ್ಟ್ರ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಮಂಗಳೂರು ನಗರ ಪೊಲೀಸ್‌ಗೆ ಬೆಳ್ಳಿ ಪದಕ

Pinterest LinkedIn Tumblr

Guru_Raj_Police_1

ಮಂಗಳೂರು,ಡಿ.22:  ಹರ್ಯಾಣ ರಾಜ್ಯದ ಪಂಚಕುಲ ಜಿಲ್ಲೆಯ ಭಾನು ಎಂಬಲ್ಲಿ ದಿನಾಂಕ 26-11-2015 ರಿಂದ 01-12-2015 ರವರೆಗೆ Indo Tibetan Border Police ನ ಕ್ಯಾಂಪಸ್‌ನಲ್ಲಿ MHA (Ministry of Home Affairs) ವತಿಯಿಂದ 59ನೇ All India Police Duty Meet (ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟ) ಆಯೋಜಿಸಲಾಗಿದ್ದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಯ ಸಿಟಿ ಕ್ರೈಮ್ ರೆಕಾರ್ಡ್‌ ಬ್ಯೂರೋ (ನಗರ ಅಪರಾಧ ದಾಖಲಾತಿ ವಿಭಾಗ) ದ ಪೊಲೀಸ್ ಕಾನ್ಸ್ಟೇಬಲ್, ಶ್ರೀ ಗುರುರಾಜ್ ಜಾಧವ್ ಎಂಡಿ ರವರು ಕಂಪ್ಯೂಟರ್ ಪರಿಜ್ಞಾನದ (Computer Awareness) ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿರುತ್ತಾರೆ.

ಇದರಲ್ಲಿ ಇವರೊಂದಿಗೆ ದೇಶದ ನಾನಾ ರಾಜ್ಯಗಳಲ್ಲಿ / ಕೇಂದ್ರಾಡಳಿತ ಪ್ರದೇಶ/ BSF(Border Security Force) /CRPF(Centrall Reserve Police Force) /ITBP (Indo Tibetan Border Police) ನಲ್ಲಿ ಪ್ರಥಮ ಹಾಗು ದ್ವೀತಿಯ ಸ್ಥಾನಗಳನ್ನು ಪಡೆದ 79 ಇತರೆ ಪ್ರತಿಸ್ಪರ್ಧಿಗಳು ಭಾಗವಹಿಸಿರುತ್ತಾರೆ.

Guru_Raj_Police_2

ಸದ್ರಿ ಒಟ್ಟು 80 ಪ್ರತಿಸ್ಪರ್ಧೆಗಳ ಮಧ್ಯೆ ಕಂಪ್ಯೂಟರ್ ಪರಿಜ್ಞಾನದ ಸ್ಪರ್ಧೆಯಲ್ಲಿ ಗುರುರಾಜ್ ಜಾಧವ್ ಎಂ.ಡಿ ರವರು ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕನ್ನು ಪಡೆದಿರುತ್ತಾರೆ.

ಇವರು ನಗರ ಗಣಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿತ್ತಿದ್ದಾರೆ. ಇವರು ಈಗಾಗಲೇ 2010 ರಲ್ಲಿ ಗುಜರಾತ್ ರಾಜ್ಯದ ಅಹ್ಮದಾಬಾದ್ ನಲ್ಲಿ ನಡೆದ 53ನೇ All India Police Duty Meet ನ ಕಂಪ್ಯೂಟರ್ ಪರಿಜ್ಞಾನದ ಸ್ಪರ್ಧೆಯಲ್ಲಿ 74 ಪ್ರತಿಸ್ಪರ್ಧೆಗಳೊಂದಿಗೆ 3 ನೇ ಸ್ಥಾನದೊಂದಿಗೆ ಕಂಚಿನ ಪದಕವನ್ನು ಪಡೆದಿದ್ದರು.

1 Comment

Write A Comment