ಕನ್ನಡ ವಾರ್ತೆಗಳು

ಬಸ್- ಲಾರಿ ಡಿಕ್ಕಿ : ಚಾಲಕನ ಸಮಯ ಪ್ರಜ್ಞೆಯಿಂದ ಪಾರಾದ ಪ್ರಯಾಣಿಕರು

Pinterest LinkedIn Tumblr

vittala_bus_lari_acdent

ವಿಟ್ಲ, ಡಿ.18: ಇಲ್ಲಿನ ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಕೇಪು ಗ್ರಾಮದ ಕಲ್ಲಂಗಳದಲ್ಲಿ ಗುರುವಾರ ಬಸ್ ಹಾಗೂ ಬೃಹತ್ ಗಾತ್ರದ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಈ ಘಟನೆಯಲ್ಲಿ ಬಸ್‍ನಲ್ಲಿದ್ದ ಪ್ರಯಾಣಿಕರು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಪಾರಾಗಿದ್ದಾರೆ.

ಕಾಸರಗೋಡಿನಿಂದ ವಿಟ್ಲಕ್ಕೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ವಿಟ್ಲ ಕಡೆಯಿಂದ ಕೇರಳಕ್ಕೆ ತೆರಳುತ್ತಿದ್ದ 10 ಚಕ್ರಗಳ ಭಾರೀ ಗಾತ್ರದ ಲಾರಿ ಇಲ್ಲಿನ ಕಲ್ಲಂಗಳ ತಿರುವಿನಲ್ಲಿ ಪರಸ್ವರ ಡಿಕ್ಕಿಯಾಯಿತು. ಈ ವೇಳೆ ವಾಹನಗಳು ಜಖಂಗೊಂಡಿದ್ದರೂ, ಯಾರಿಗೂ ಗಾಯಗಳಾಗಿಲ್ಲ. ಘಟನೆಯಿಂದಾಗಿ ಸುಮಾರು ಒಂದು ಗಂಟೆ ಕಾಲ ದಾರಿಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಬಳಿಕ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಅಪಘಾತಕ್ಕೀಡಾದ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಆದೇಶಕ್ಕಿಲ್ಲ ಬೆಲೆ
ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ರಸ್ತೆಯಲ್ಲಿ ಘನ ವಾಹನ ಸಂಚಾರಕ್ಕೆ ನಿಷೇಧ ಹೇರಿ ಕಲ್ಲಡ್ಕದಲ್ಲಿಯೇ ನಾಮಫಲಕ ಅಳವಡಿಸಲಾಗಿದೆ. ಆದರೂ ಈ ದಾರಿಯಲ್ಲಿ ಘನವಾಹನಗಳ ಸವಾರಿ ಮುಂದುವರಿದಿದೆ. ಈ ನಡುವೆ ನಾಮಫಲಕವನ್ನು ಕಿತ್ತೆಸೆಯಲಾಗಿರುವುದು ಆದೇಶ ಗಾಳಿಗೆ ತೂರಲು ಅವಕಾಶ ನೀಡಿದಂತಾಗಿದೆ ಎಂದು ನಾಗರಿಕರು ದೂರಿದ್ದಾರೆ.

Write A Comment