ಕನ್ನಡ ವಾರ್ತೆಗಳು

‘ಪಿಲಿಕುಲ ಹಬ್ಬ’ದಲ್ಲಿ: ತುಳು ರಸಪ್ರಶ್ನೆ

Pinterest LinkedIn Tumblr

pilikula_)habba_quzze

ಮ೦ಗಳೂರು,ಡಿ.17: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪಿಲಿಕುಲ ನಿಸರ್ಗಧಾಮದ ವತಿಯಿಂದ 2015 ಡಿಸೆಂಬರ್ 24,25,26,27 ರಂದು ಪಿಲಿಕುಲದಲ್ಲಿ ಜರಗಲಿರುವ ‘ಪಿಲಿಕುಲ ಹಬ್ಬ’ದ ಪ್ರಯುಕ್ತ ಡಿ: 24 ರಂದು 2.30 ರಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುನಾಡು ನುಡಿ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳ ಕುರಿತು ‘ತುಳು ರಸಪ್ರಶ್ನೆ’ಯನ್ನು ಆಯೋಜಿಸಲಾಗಿದೆ.

ಆಸಕ್ತ ತಂಡಗಳು ಸ್ಪರ್ಧಾ ಸಂಯೋಜಕರಾದ ಶ್ರೀ ಯಾದವ ವಿ.ಕರ್ಕೇರ ದೂ;ಸಂಖ್ಯೆ:  9449102026 ಇವರನ್ನು ಸಂಪರ್ಕಿಸಿ ಹೆಸರು ನೋಂದಾವಣೆ ಮಾಡುವಂತೆ ಕೋರಲಾಗಿದೆ. ಸ್ಥಳದಲ್ಲಿಯೂ ನೋಂದಾಯಿಸಬಹುದು. ವಿಜೇತರಿಗೆ ಬಹುಮಾನಗಳಿವೆ.

ತುಳು ಬದುಕಿನ ಬಗ್ಗೆ ಅರಿವು ಮೂಡಿಸುವ ಈ ಪ್ರಯತ್ನದಲ್ಲಿ ತುಳುವರು, ತುಳು ಬಂಧುಗಳು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ತಿಳಿಸಿದೆ

Write A Comment