ಕನ್ನಡ ವಾರ್ತೆಗಳು

ಗೆಲುವು ನನ್ನ ಗುರಿ; ಪಕ್ಷೇತರನಾಗಿಯೇ ಕೆಲಸ ಮಾಡುವೆ-ಕೆ. ಜಯಪ್ರಕಾಶ್ ಹೆಗ್ಡೆ

Pinterest LinkedIn Tumblr

????????????????????????????????????

ಉಡುಪಿ: ಸದ್ಯದ ಮಟ್ಟಿಗೆ ವಿಧಾನಪರಿಷತ್ ಚುನಾವಣೆ ಸಮರ್ಥವಾಗಿ ಎದುರಿಸಿ ಅದರಲ್ಲಿ ಗೆಲ್ಲುವುದೇ ನನ್ನ ಬಹುಮುಖ್ಯ ಗುರಿಯಾಗಿದೆ. ಬಳಿಕವೂ ಪಕ್ಷೇತರನಾಗಿಯೇ ಕೆಲಸ ಮಾಡುವೆ ಎಂದು ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದಲ್ಲಿ ಹಲವರು ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿದ್ದು ಅವರನ್ನು ಪಕ್ಷ ಕಂಡು ಕಾಣ್ದ ಹಾಗೆ ಬಿಟ್ಟಿದೆ. ಆದರೇ ಕೆಲವರ ವಿರುದ್ಧ ಮಾತ್ರ ಈಗ ಕ್ರಮಕೈಗೊಳ್ಳುವುದು ಯಾವ ಕಾರಣಕ್ಕಾಗಿ ಎಂದು ಜಯಪ್ರಕಾಶ್ ಹೆಗ್ಡೆಯವರು ಪ್ರಶ್ನಿಸಿದರು. ಅಲ್ಲದೇ ಈ ಬಗ್ಗೆ ನೋವಾಗ್ದೆ ಎಂದು ವರು ಇದೇ ಸಂದರ್ಭ ಹೇಳಿದರು. ಕಾಂಗ್ರೆಸ್ ಮುಖಂಡರು ಟೀಕೆಗಳನ್ನು ಮಾಡುವುದು ಬಿಟ್ಟು ತಮ್ಮ ತಮ್ಮ ಕೆಲಸ ಅವರು ಮಾಡಲಿ ಗೆಲುವು ಯಾರು ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದರು.

ಕಾಂಗ್ರೆಸ್ ಪಕ್ಷವು ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರತಾಪ್ ಚಂದ್ರ ಶೆಟ್ಟಿಗೆ ಟಿಕೆಟ್ ನೀಡಿ ಪಕ್ಷದ ನಿಷ್ಟಾವಂತ ಹಾಗೂ ಸಕ್ರೀಯ ಕಾರ್ಯಕರ್ತರನ್ನು ಕಡೆಗಣಿಸಿದೆ.

Write A Comment