ಕನ್ನಡ ವಾರ್ತೆಗಳು

ವಿಶೇಷ ಚೇತನರಲ್ಲಿರುವ ಪ್ರತಿಭೆಯನ್ನು ಗುರುತಿಸೋಣ : ಕೆ.ಎನ್.ಕೃಷ್ಣ ಭಟ್ .

Pinterest LinkedIn Tumblr

handi_cap_wheelchair

ಮಂಗಳೂರು,ಡಿ.14: ವಿಶೇಷ ಚೇತನರಲ್ಲಿರುವ ಉತ್ತಮ ಗುಣಗಳನ್ನೂ ಪ್ರತಿಭೆಗಳನ್ನೂ ಗುರುತಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಷ್ಟೆ ಹೊರತು ಅಂತಹ ಮಕ್ಕಳು ನಮ್ಮ ಮನೆಯಲ್ಲಾಗಲಿ ಊರಿನಲ್ಲಾಗಲೀ ಇದ್ದಾರಲ್ಲಾ ಎಂದು ಕೊರಗುವುದು ಸರಿಯಲ್ಲ. ಅವರಿಗೆ ಸಾಧನೆಯ ಹಾದಿ ತೆರೆದು ಕೊಡುವುದು ನಮ್ಮ ಕರ್ತವ್ಯ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ ಎನ್ ಕೃಷ್ಣ ಭಟ್ ನುಡಿದರು.

ಅವರು ಬದಿಯಡ್ಕದಲ್ಲಿರುವು ಕುಂಬಳೆ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆದ ವಿಶೇಷ ಚೇತನರ ದಿನಾಚರಣೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಕೊನೆಯಲ್ಲಿ ಆಯ್ದ ಮಕ್ಕಳಿಗೆ ಗಾಲಿ ಕುರ್ಚಿ, ಎಫ್ ಒ, ಕನ್ನಡಕ ಇತ್ಯಾದಿಗಳನ್ನು ವಿತರಿಸಿದರು. ಬದಿಯಡ್ಕ ಗ್ರಾಮ ಪಂಚಾಯತಿನ ಉಪಾಧ್ಯಕ್ಷೆ ಝೈನಬ ಮೊಯ್ದೀನ್ ಕುಟ್ಟಿ ಅಧ್ಯಕ್ಷತೆ ವಹಿಸಿದರು.

handi_cap_wheelchair_1
ಪೆರಡಾಲ ಜಿಬಿಯುಪಿ ಶಾಲೆ ಮುಖ್ಯೋಪಾಧ್ಯಾಯ ಗುರುಮೂರ್ತಿ, ಅದೇ ಶಾಲೆಯ ಅಧ್ಯಾಪಕ ಆ ದಿನ ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಪ್ರಾಯೋಜಿಸಿದ ಸೋಮನಾಥನ್ , ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಾರ್ಯಕ್ರಮ ನಿರ್ವಹಣಾಧಿಕಾರಿ ಯೂಸುಫ್ ಕೊಟ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.

ತರಬೇತುದಾರರಾದ ಕಾರ್ಮೆಲಿ ಟೀಚರ್ ಸ್ವಾಗತಿಸಿ ವಿಶೇಷ ಪರಿಗಣನೆ ಅಗತ್ಯವಿರುವ ಮಕ್ಕಳ ವಿಷಯಗಳ ಸಂಪನ್ಮೂಲ ವ್ಯಕ್ತಿ ಲಕ್ಷ್ಮೀಪ್ರಿಯ ವಂದಿಸಿದರು. ಬೆಳಗ್ಗೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Write A Comment