ಕನ್ನಡ ವಾರ್ತೆಗಳು

ರಸ್ತೆ ಬದಿಗೆ ತ್ಯಾಜ್ಯ ಎಸೆಯುತ್ತಿದ್ದ ವಾಹನ ಚಾಲಕ ಪೊಲೀಸ್ ವಶ.

Pinterest LinkedIn Tumblr

puttur_pickup_gadi

ಪುತ್ತೂರು,ಡಿ.03: ಪುತ್ತೂರು – ಮಾಣಿ ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಕಲ್ಲರ್ಪೆ ಎಂಬಲ್ಲಿ ಪಿಕ್ ಆಪ್ ವಾಹನದಲ್ಲಿ ಕಸ ತ್ಯಾಜ್ಯಗಳನ್ನು ತಂದು ರಸ್ತೆ ಬದಿಯಲ್ಲಿ ಹಾಕುತ್ತಿರುವಾಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಮತ್ತು ಸಿಬ್ಬಂದಿಗಳು ರೆಡೆ ಹ್ಯಾಂಡಾಗಿ ಹಿಡಿದು ಗ್ರಾಮಾಂತರ ಪೋಲಿಸ್ ಠಾಣೆಗೆ ಒಪ್ಪಿಸಿರುವ ಘಟನೆ ಬುದವಾರ ನಡೆದಿದೆ.

ಎ ಪಿ ಜೆ ರಝಾಕ್ ರವರು ವಾಹನ ಸಂಖ್ಯೆ ಕೆಎ 46 108ರ ಪಿಕ್ ಆಪ್ ವಾಹನದಲ್ಲಿ ವಿಲೇವಾರಿ ಮಾಡಿದ ಕಸ ತ್ಯಾಜ್ಯಗಳನ್ನು ತಂದು ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಹಾಕುತ್ತಿರುವಾಗ ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷ ವಿಜಯ ಬಿ ಎಸ್, ಉಪಾಧ್ಯಕ್ಷ ವಸಂತ ಶ್ರೀದುರ್ಗಾ, ಸದಸ್ಯ ಜಬ್ಬಾರ್ ಎಸ್, ಸೇರಿ ಈತನನ್ನು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಹಾಗೂ ರಸ್ತೆ ಬದಿಗೆ ಹಾಕಲಾದ ತ್ಯಾಜ್ಯಗಳನ್ನು ಪುನ: ಅದೇ ಪಿಕ್ ಆಪ್‌ಗೆ ತುಂಬಿಸಿ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಯಿತು.

ಮುಂದೆ ಇಂತಹ ಪ್ರಸಂಗಗಳು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದರೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾ.ಪಂ ಉಪಾಧ್ಯಕ್ಷ ವಸಂತ ಶ್ರೀದುರ್ಗಾ ಹೇಳಿದ್ದಾರೆ.

Write A Comment