ಕನ್ನಡ ವಾರ್ತೆಗಳು

ಜೆರೋಧಾ ಮೂಲಕ ಈಗ ಕನ್ನಡದಲ್ಲಿಯೂ ಷೇರುಪೇಟೆ ವಹಿವಾಟು ಸಾದ್ಯ : ಕಾರ್ತಿಕ್ ರಂಗಪ್ಪ

Pinterest LinkedIn Tumblr

zerodha_press_meet_1

ಮಂಗಳೂರು,ಡಿ.3 : ನಮ್ಮ ಮಾತೃ ಭಾಷೆಯಲ್ಲಿ ಷೇರು ಪೇಟೆ ವಹಿವಾಟು ನಡೆಸ ಬಹುದಾಗಿದ್ದು, ಜೆರೋಧಾ ಮೂಲಕ ಈಗ ಕನ್ನಡದಲ್ಲಿಯೂ ಷೇರುಪೇಟೆ ವಹಿವಾಟು ಮಾಡಬಹುದು. ಜೆರೋಧಾದ ನೂತನ ಚಿಂತನೆಯ ಫಲವಾಗಿ ಇದು ಸಾಧ್ಯವಾಗಲಿದೆ ಎಂದು ಜೆರೋಧಾದ ಉಪಾಧ್ಯಕ್ಷ (ಸಂಶೋಧನೆ ಮತ್ತು ಶಿಕ್ಷಣ) ಕಾರ್ತಿಕ್ ರಂಗಪ್ಪ ಅವರು ತಿಳಿಸಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜೆರೋಧಾ, ಭಾರತದ ಪ್ರಮುಖ ಆನ್‌ಲೈನ್ ಷೇರುಪೇಟೆ ವಹಿವಾಟು ತಾಣವಾಗಿದ್ದು, ಇಂದು ವೆಬ್ ಆಧಾರಿತ ಷೇರುಪೇಟೆ ವೇದಿಕೆ KITE ಅನ್ನು ಕನ್ನಡದಲ್ಲಿ ಆರಂಭಿಸಿದೆ. KITE ಎಂಬುದು ಸಂಕ್ಷಿಪ್ತಗೊಳಿಸಿದ ವೆಬ್ ಆಧಾರಿತವಾದ ಷೇರುಪೇಟೆ ವಹಿವಾಟು ತಾಣವಾಗಿದ್ದು, ಇದನ್ನು ಮೊಬೈಲ್ ಹಾಗೂ ಟ್ಯಾಬ್‌ಗಳಲ್ಲೂ ಕನಿಷ್ಠ ಸಂವಹನದ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬಹುದು. ಸಂಹವನ ಸರಳವಾಗಿದ್ದು, ವಿವರಣಾತ್ಮಕವಾಗಿದೆ. ಕನಿಷ್ಠ ಜ್ಞಾನವಿರುವ ಯಾವುದೇ ವ್ಯಕ್ತಿಯು ಲಾಗಿನ್ ಮಾಡಿ ಟ್ರೇಡಿಂಗ್ ವಹಿವಾಟು ಆರಂಭಿಸ ಬಹುದು ಎಂದು ಹೇಳಿದರು.

zerodha_press_meet_2 zerodha_press_meet_3

ಕನ್ನಡದಲ್ಲಿ ಷೇರು ವಹಿವಾಟುಗೆ ಅವಕಾಶ ಕಲ್ಪಿಸುವ ಮೂಲಕ ನಾವು ಮಾತೃಭಾಷೆಯಲ್ಲಿ ಷೇರು ವಹಿವಾಟು ಮಾಡಲು ಬಯಸುವ ದೊಡ್ಡ ಸಮೂಹ ತಲುಪಲಿದ್ದೇವೆ. ಇಂಟರ್‌ನೆಟ್ ಪ್ರಚಲಿತವಾಗುತ್ತಿರುವ ಈ ದಿನಗಳಲ್ಲಿ KITE ಪ್ರತಿಯೊಬ್ಬರು ಆನ್‌ಲೈನ್ ವಹಿವಾಟಿನತ್ತ ಹೊರಳುವಲ್ಲಿ ಮುಖ್ಯ ಪಾತ್ರ ವಹಿಸಲಿದೆ ಎಂದವರು ಹೇಳಿದರು.

KITE ಜತೆಗೆ ಕ್ವಾಂಟ್ ಎಂದು ಕರೆಯಲಾಗುವ ಉನ್ನತೀಕರಿಸಿದ ವಿಶ್ಲೇಷಣಾತ್ಮಕ ಮತ್ತು ದೃಶ್ಯರೂಪದ ಸಂವಹನ ವೇದಿಕೆಯೂ ಇದೆ. ಇದು, ವಹಿವಾಟುದಾರರು ಸ್ವಭಾವಕ್ಕೆ ಪೂರಕವಾಗಿ ಸುಮಾರು 70,0000ಕ್ಕೂ ಅಧಿಕ ಷೇರು ಮತ್ತು ಪೂರಕ ಹೂಡಿಕೆಯ ಸಾಧ್ಯತೆಗಳನ್ನು ಪರಿಚಯ ಮಾಡಿಕೊಡಲಿದೆ’

ಕರ್ನಾಟಕದಲ್ಲಿ ಷೇರು ವಹಿವಾಟುದಾರರ ದೃಷ್ಟಿಯಿಂದ ಇದೊಂದು ದೊಡ್ಡ ಹೆಜ್ಜೆ. ಕನ್ನಡದಲ್ಲಿಯೇ ಷೇರು ವಹಿವಾಟು ವೇದಿಕೆ ಒದಗಿಸುವ ಮೂಲಕ ಷೇರು ವಹಿವಾಟು, ಹೂಡಿಕೆದಾರರ ಸಮೂಹಕ್ಕೆ ಇದ್ದ ದೊಡ್ಡ ಅಡೆತಡೆ ನಿವಾರಣೆ ಆದಂತಾಗಿದೆ. ಷೇರು ಮಾರುಕಟ್ಟೆಯ ಪ್ರಮುಖ ಸೂಚನೆಗಳನ್ನು ಕನ್ನಡದಲ್ಲಿಯೇ ಒದಗಿಸಲು ಆದಷ್ಟು ಎಚ್ಚರಿಕೆ ವಹಿಸಲಾಗಿದೆ. KITEನ ಉನ್ನತ ತಂತ್ರಜ್ಞಾನದಿಂದಾಗಿ ಸ್ಥಳೀಯ ಭಾಷೆಯಲ್ಲಿಯೇ ಮಾರುಕಟ್ಟೆಯ ಅನಿಯಮಿತ ಸಾಧ್ಯತೆಗಳನ್ನು ತಲುಪುವುದು ಇದರಿಂದ ಸಾಧ್ಯವಾಗಲಿದೆ’ ಎಂದು ಕಾರ್ತಿಕ್ ರಂಗಪ್ಪ ಅವರು ವಿವರಿಸಿದರು.

zerodha_press_meet_4 zerodha_press_meet_5

KITE ಇದರ ಜತೆಗೆ ಎಲ್ಲ ಷೇರುಗಳ ದರ ಕುರಿತು ನೇರ ಮಾಹಿತಿ ನೀಡಲಿದ್ದು, ಎರಡು ಕ್ಲಿಕ್‌ಗಳ ಮೂಲಕ ಅಥವಾ ಕಂಪ್ಯೂಟರ್ ಶಾರ್ಟ್‌ಕಟ್‌ಗಳ ಮೂಲಕ ಖರೀದಿ ಅಥವಾ ಮಾರಾಟ ಮಾಡಲು ಸಾಧ್ಯವಿದೆ. ಇದರಲ್ಲಿ ಉನ್ನತೀಕರಿಸಿದ ವಿಶ್ಲೇಷಣಾತ್ಮಕ ಸೂಚಕಗಳಿವೆ. ಹಾಗೂ ಎಲ್ಲ ಷೇರುಗಳ ಕಳೆದ ಐದು ವರ್ಷಗಳ ವಹಿವಾಟು ಇತಿಹಾಸವೂ ಇದೆ. ಕನ್ನಡ ಹೊರತುಪಡಿಸಿ KITE ಅನ್ನು ಇತರೆ ಭಾರತೀಯ ಪ್ರಮುಖ ಭಾಷೆಗಳಲ್ಲಿಯೂ ಬರುವ ತಿಂಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ಜೆರೊಧಾ ಪ್ರಶಸ್ತಿ ಪುರಸ್ಕೃತ ಆನ್‌ಲೈನ್ ರಿಯಾಯಿತಿ ಬ್ರೋಕರೇಜ್ ಉದ್ಯಮವಾಗಿದ್ದು, ವಹಿವಾಟುದಾರರು ತಮ್ಮ ಷೇರುಗಳ ಮಾರಾಟ, ಖರೀದಿ, ಹೂಡಿಕೆ ಆಯ್ಕೆಗಳ, ಕರೆನ್ಸಿಗಳು, ಉತ್ಪನ್ನಗಳನ್ನು ಹಿಂದೆಂದೂ ಇಲ್ಲದಂತೆ ಉಚಿತ ಬ್ರೋಕರೇಜ್ ಮಾದರಿಯಲಿ ಒದಗಿಸಲಿದ್ದು, ಗ್ರಾಹಕರಿಗೆ ಹೆಚ್ಚಿನ ಮೌಲ್ಯ ಮತ್ತು ಅನುಕೂಲಗಳನ್ನು ಒದಗಿಸಲಿದೆ. ತಾಂತ್ರಿಕವಾಗಿ ಮಂಚೂಣಿಯಲ್ಲಿ ಇರುವ ಜೆರೊದಾ ಪ್ರಸ್ತುತ ಅತ್ಯಾಧುನಿಕವಾದ ವಹಿವಾಟು ವೇದಿಕೆಯನ್ನು ಅಂದರೆ ಪಿ‌ಐ ಮತ್ತು ಕೈಟ್ ಹೆಸರಿನಲ್ಲಿ ಒದಗಿಸುತ್ತಿದೆ. ಅಲ್ಲದೆ, ಕ್ಯೂ ಮತ್ತು ಕ್ವಾಂಟ್ ಹೆಸರಿನಲ್ಲಿ ವರದಿಗಾರಿಕೆ ಪರಿಕರಗಳನ್ನು ಒದಗಿಸಲಿದೆ.

ಜೆರೊಧಾ ಸಂಪೂರ್ಣವಾಗಿ ಆನ್‌ಲೈನ್ ವಹಿವಾಟುಗೆ ನೆರವಾಗುವ ಮೊದಲ ಸಂಸ್ಥೆಯಾಗಿದ್ದು, ಡಿಸ್ಕೌಂಟ್ ಬ್ರೋಕಿಂಗ್ ಪರಿಕಲ್ಪನೆಯನ್ನು ಪರಿಚಯಿಸಿದ ಮೊದಲ ಸಂಸ್ಥೆಯಾಗಿದೆ. ವಹಿವಾಟು ಪ್ರಮಾಣ ಎಷ್ಟೇ ದೊಡ್ಡದಿದ್ದರೂ ಕೂಡಾ ಇಲ್ಲಿ ಪ್ರತಿ ವಹಿವಾಟಿಗೆ ರೂ. 20 ಶುಲ್ಕ ನಿಗದಿ ಪಡಿಸಲಾಗುತ್ತದೆ ಎಂದು ರಂಗಪ್ಪ ಅವರು ತಿಳಿಸಿದರು..

ಪತ್ರಿಕಾಗೋಷ್ಠಿಯಲ್ಲಿ ಜೆರೊಧಾದ ಕಾರ್ಪೊರೇಟ್ ಕಮ್ಯುನಿಕೇಷನ್ ಮ್ಯಾನೇಜರ್ ಪ್ರಿತೀಶ್ ಚಕ್ರವರ್ತಿ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಳಿಗೆ ವೆಬ್‌ಸೈಟ್ : www.zerodha.com ಹಾಗೂ Email: prithish@zerodha.com ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ

Write A Comment