ಕನ್ನಡ ವಾರ್ತೆಗಳು

ನಕಲಿ ಫೇಸ್‌ಬುಕ್ ಖಾತೆ ಮೂಲಕ ಪ್ರವಾದಿ ಮಹಮ್ಮದ್‌ರಿಗೆ ಅಪಮಾನ

Pinterest LinkedIn Tumblr

facebook_fake_2

ಪುತ್ತೂರು,ಡಿ.02 : ನಕಲಿ ಫೇಸ್ ಬುಕ್ ಖಾತೆಯಲ್ಲಿ ಕಾರ್ಟೂನ್ ಮತ್ತು ಅವಾಚ್ಯ ಶಬ್ದ ಬಳಸುವ ಮೂಲಕ ಪ್ರವಾದಿ ಮಹಮ್ಮದ್ ಅವರಿಗೆ ಅಪಮಾನ ಎಸಗಲಾಗಿರುವ ಬಗ್ಗೆ ಅರಿಯಡ್ಕ ಶೇಖಮಲೆಯ ಮುಹಮ್ಮದ್ ಜಾಬೀರ್ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ಸುಖಿತ್ ಶೆಟ್ಟಿ ಎಂಬವರು ಡೈಮಂಡ್ ಸ್ವದ್ ಪುತ್ರಿ ಎಂಬ ಫೇಸ್ ಬುಕ್ ಖಾತೆಯ ಮೂಲಕ ಅಂತ್ಯ ಪ್ರವಾದಿ ಮಹಮ್ಮದ್ ಮುಸ್ತಫ ಅವರ ಕಾರ್ಟೂನ್ ರಚಿಸಿ ಅವಹೇಳನ ನಡೆಸಿ ಅವಾಚ್ಯ ಶಬ್ದದಿಂದ ನಿಂಧಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Write A Comment