ಕನ್ನಡ ವಾರ್ತೆಗಳು

ಉಜಿರೆಯಲ್ಲಿ ಅಖಿಲ ಕರ್ನಾಟಕ 12 ನೆಯ ಹಸ್ತಪ್ರತಿ ಸಮಾವೇಶ.

Pinterest LinkedIn Tumblr

hampi_hastha_samelana

ಉಜಿರೆ,ಡಿ.02 : ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ ಮತ್ತು‌ ಉಜಿರೆಯ ಶ್ರೀ ಧ. ಮಂ.ಕಾಲೇಜಿನ ಡಾ. ಹಾ.ಮಾ. ನಾಯಕ ಸಂಶೋಧನ ಕೇಂದ್ರ ಹಾಗೂ ಕನ್ನಡ ವಿಭಾಗದ ಸಹಯೋಗದೊಂದಿಗೆ‌ಎರಡು ದಿನಗಳ ಅಖಿಲ ಕರ್ನಾಟಕಹನ್ನರಡನೆಯ ಹಸ್ತಪ್ರತಿ ಸಮ್ಮೇಳನವುಡಿ. 4 ಮತ್ತು 5 ರಂದುಶ್ರೀ ಧ.ಮಂ.ಕಾಲೇಜಿನಲ್ಲಿ ನಡೆಯಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಧಾರವಾಡದ ಹಿರಿಯ ವಿದ್ವಾಂಸರಾದಡಾ. ವೀರಣ್ಣರಾಜೂರಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ‌ಅತಿಥಿಯಾಗಿ ಬೆಂಗಳೂರಿನ ಎರ್ತೂರು ಶಾಂತಿರಾಜ ಶಾಸ್ತ್ರೀ ಟ್ರಸ್ಟ್‌ನ‌ ಅಧ್ಯಕ್ಷ‌ ಎಸ್. ಜೀತೇಂದ್ರ ಕುಮಾರ ಭಾಗವಹಿಸಲಿದ್ದಾರೆ. ಕಾರ್ಯಕ್ರಮ‌ ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ‌ಎಸ್. ಘಂಟಿ ವಹಿಸಲಿದ್ದಾರೆ.

ಹಸ್ತಪ್ರತಿ ವ್ಯಾಸಂಗ- 14 ಮತ್ತು ಮೂರನೆಯ ಪದ್ಮನಾಭ ಕವಿಯ ರಾಮಚಂದ್ರ ಚರಿತ ಪುರಾಣ ಪುಸ್ತಕಗಳು ಲೋಕಾರ್ಪಣೆಯಾಗಲಿದೆ. ಈ ಸಮ್ಮೇಳನದಲ್ಲಿ ಜೈನ ಸಾಹಿತ್ಯ ಸಂಸ್ಕೃತಿ ಕುರಿತು ವಿಶೇಷ ಅಧ್ಯಯನ ಮಾಡಿರುವ ಪಂಡಿತರತ್ನ‌ ಎರ್ತೂರು ಶಾಂತಿ ರಾಜಶಾಸ್ತ್ರೀ‌ ಅವರ ಸಾಹಿತ್ಯ ಸಂಸ್ಮರಣೆ , ಕರಾವಳಿ ಕರ್ನಾಟಕದ ಹಸ್ತಪ್ರತಿ ಸಂಪತ್ತು ಮತ್ತು ಮಾರ್ಗ ಸಾಹಿತ್ಯ ಪರಿಷ್ಕರಣ ಪರಂಪರೆ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಜೊತೆಗೆ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಸಾಧನೆ ಕುರಿತು ‌ಒಂದು ವಿಶೇಷ ಉಪನ್ಯಾಸ ಹಾಗೂ ಪ್ರಾಚೀನ ತಾಡೋಲೆ, ಕೋರಿಕಾಗದಕಡತ ಹಾಗೂ ಪ್ರಾಚೀನ ದಾಖಲೆಗಳ ಪ್ರದರ್ಶನದವಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಸ್ತಪ್ರತಿ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಇದು ಬಹಳ ಅಪರೂಪದ ಸಮಾವೇಶವಾಗಿದ್ದು‌ ಇದರಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಡಾ. ಎಸ್. ಡಿ. ಶೆಟ್ಟಿ (9448724697) ಅಥವಾ ಡಾ.ದಿವ ಕೊಕ್ಕಡ (9902032480) ಅವರನ್ನು ಸಂಪರ್ಕಿಸಬಹುದು‌ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಯಶೋವರ್ಮ‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment