ಕನ್ನಡ ವಾರ್ತೆಗಳು

ಬಜ್ಪೆ ಈದ್ಗಾ ಮಸೀದಿ ಮೇಲೆ ದುರ್ಷ್ಕಮಿಗಳಿಂದ ಕಲ್ಲು ತೂರಾಟ

Pinterest LinkedIn Tumblr

bajpe_amsidi_stonepedl_1

ಬಜ್ಪೆ,ಡಿ.01 : ಬಜ್ಪೆ ಪೋರ್ಕೊಡಿ ದ್ವಾರ ಬಳಿ ಇರುವ ಈದ್ಗಾ ಮಸೀದಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿರುತ್ತದೆ.

ಮಸೀದಿಯಲ್ಲಿ ಎಂದಿನಂತೆ ನಮಾಜ್ ನಿರ್ವಹಿಸಲು ಆಗಮಿಸಿದ ಮಸೀದಿಯ ಧರ್ಮ ಗುರುಗಳು ಈ ವಿಷಯವನ್ನು ಮೊದಲಿಗೆ ಪೊಲೀಸರಿಗೆ ತಿಳಿಸಿದರು ಮಸೀದಿಯ ಎದುರುಗಡೆ ಕಿಟಕಿಯ ಗಾಜು ಹೊಡೆದಿದ್ದು ಅಪಾರ ನಷ್ಟವಾಗಿದೆ. ವಿಷಯವು ತಿಳಿಯುತ್ತಿದ್ದಂತೆ ಸಾರ್ವಜನಿಕರು ಮಸೀದಿ ಬಳಿ ಸೇರಿದರು , ಘಟನಾ ಸ್ಥಳಕ್ಕೆ ಬಜ್ಪೆ ಪೋಲಿಸ್ ವೃತ್ತ ನಿರೀಕ್ಷಕರಾದ ನಾಗರಾಜ್ ,ಏ. ಸಿ. ಪಿ , ಹಾಗು ಇನ್ನಿತರ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು .

bajpe_amsidi_stonepedl_2

ಈ ಬಗ್ಗೆ ಬಜ್ಪೆ ಪೋಲಿಸ್ ಠಾಣೆಯಲ್ಲಿ ಬಜ್ಪೆ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಜಾವಳೆ ಇಸ್ಮಾ‌ಇಲ್ , ಸದಸ್ಯರಾದ ಸಲೀಂ ,ಹಸೈನಾರ್ , ಹನೀಫ್ ಹಾಗು ಇನ್ನಿತರರ ನೇತ್ರತ್ವದಲ್ಲಿ ದೂರು ದಾಖಲಿಸಲಾಗಿದೆ .

ಘಟನಾ ಸ್ಥಳಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಯೋಗ ಭೇಟಿ :
ಈದ್ಗಾ ಮಸೀದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ನಿಯೋಗವು ಭೇಟಿ ನೀಡಿದ್ದು ಆರೋಪಿಗಳನ್ನು ಶೀಘ್ರವಾಗಿ ಭಂದಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಘಟಕ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಿಯಾಜ್ ಆಗ್ರಹಿಸಿದ್ದಾರೆ.

Write A Comment