ಕನ್ನಡ ವಾರ್ತೆಗಳು

ಕುಂದಾಪುರ ಸಂಗಮ್ ಪ್ರದೇಶದಲ್ಲಿ ಹೊಳೆ ಒತ್ತುವರಿ; ಕ್ಯಾರೇ ಅನ್ನದ ಅಧಿಕಾರಿಗಳು..!

Pinterest LinkedIn Tumblr

ಕುಂದಾಪುರ: ಕುಂದಾಪುರದ ಪುರಸಭಾ ವ್ಯಾಪ್ತಿಯ ಸಂಗಮ್ ಸೇತುವೆ ಬಳಿ ಮರಳುಗಾರಿಕೆಯಿಂದ ಅವ್ಯಾಹತವಾಗಿ ಹೊಳೆ ಒತ್ತುವರಿ ನಡೆಯುತ್ತಿದ್ದು ಸಂಬಂದಪಟ್ಟವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ.

Kndpr_Hole_Ottuvari (5) Kndpr_Hole_Ottuvari (4) Kndpr_Hole_Ottuvari (6) Kndpr_Hole_Ottuvari (7) Kndpr_Hole_Ottuvari (2) Kndpr_Hole_Ottuvari (1) Kndpr_Hole_Ottuvari (3)

ಹಲವಾರು ದಿನಗಳಿಂದ ಸಂಗಮ್ ಸೇತುವೆ ಬಳಿ ಮರಳುಗಾರಿಕೆ ನಡೆಸುತ್ತಿದ್ದವರು ಹೊಳೆಗೆ ಮಣ್ಣು ತುಂಬಿಸಿ ಅತಿಕ್ರಮಣ ಮಾಡಿದ್ದಾರೆ ಎನ್ನಲಾಗಿದ್ದು ಮರಳು ಸಂಗ್ರಹ ಮಾಡುವುದಕ್ಕೆ ಸ್ಥಳ ಕೊಟ್ಟರೂ ಕೂಡ ಹೊಳೆಗೆ ಮಣ್ಣು ತುಂಬಿಸಿದ್ದು ಸರಿಯಾದ ಕ್ರಮವಲ್ಲ ಎಂದು ಪ್ರಜ್ನಾವಂತ ನಾಗರೀಕರು ದೂರು ನೀಡಿದ್ದರು. ಒಂದಾನೊಂದು ಕಾಲದಲ್ಲಿ ಡಂಪಿಂಗ್ ಯಾರ್ಡ್ ಆಗಿದ್ದ ಈ ಪ್ರದೇಶದಲ್ಲಿ ಸದ್ಯ ಮರಳುಗಾರಿಕೆ ನಡೇಯುತ್ತಿದ್ದು ಸದ್ಯ ಲಾರಿ ನಿಲ್ಲಿಸಲು ಹಾಗೂ ಮರಳು ಸಂಗ್ರಹಕ್ಕಾಗಿ ಕೆಂಪುಗಲ್ಲು ಹಾಗೂ ಮಣ್ಣು ಹಾಕಿ ನದಿಯನ್ನು ಅತಿಕ್ರಮಣ ಮಾಡುತ್ತಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದಷ್ಟೇ ಹೊಳೆ ಒತ್ತುವರಿ ಆರೋಪದ ಹಿನ್ನಲೆಯಲ್ಲಿ ಭೇಟಿ ನೀಡಿದ್ದ ತಹಶೀಲ್ದಾರ್ ಹಾಗೂ ಪುರಸಭಾ ಮುಖ್ಯಾಧಿಕಾರಿಗಳು ಹೊಳೆಗೆ ಹಾಕಿದ್ದ ಮಣ್ಣನ್ನು ಕೂಡಲೇ ತೆರವುಗೊಳಿಸುವಂತೆ ಎಚ್ಚರಿಸಿದ್ದರೂ ಕೂಡ ಭಾನುವಾರ ಬೆಳಿಗ್ಗೆನಿಂದ ಹೊಳೆ ಅತಿಕ್ರಮಣ ಕಾರ್ಯ ನಡೇಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Write A Comment