ಕನ್ನಡ ವಾರ್ತೆಗಳು

ಜಿಲ್ಲಾಡಳಿತದಿಂದ ಕನಕ ಜಯಂತಿ ಆಚರಣೆ.

Pinterest LinkedIn Tumblr

Zp_kanaka_jayanthi_1

ಮಂಗಳೂರು,ನ.28 : ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವತಿಯಿಂದ ಕರಾವಳಿ ಕುರುಬರ ಸಂಘ(ರಿ), ಮಂಗಳೂರು ಇವರ ಸಹಕಾರದೊಂದಿಗೆ ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರಿನ ನೇತ್ರಾವತಿ ಸಭಾಂಗಣದಲ್ಲಿ  ನಡೆದ ‘528 ನೇ ಕನಕ ಜಯಂತಿ’ ಆಚರಿಸಲಾಯಿತು. ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ನೇರವೇರಿಸಿದರು

Zp_kanaka_jayanthi_2 Zp_kanaka_jayanthi_3 Zp_kanaka_jayanthi_4 Zp_kanaka_jayanthi_5 Zp_kanaka_jayanthi_6Zp_kanaka_jayanthi_9 Zp_kanaka_jayanthi_10 Zp_kanaka_jayanthi_7 Zp_kanaka_jayanthi_8

ಕೊಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಕೆ ಶ್ರೀಪತಿ ಹಯಗುಂದ ಇವರು ಕನಕ ಜಯಂತಿ ಸಂದೇಶವನ್ನು ನೀಡಿದರು.

ಸಭಾಕಾರ್ಯಕ್ರಮಕ್ಕೂ ಮುನ್ನ ನಗರದ ಉರ್ವಸ್ಟೋರ್ ನಿಂದ ಜಿಲ್ಲಾ ಪಂಚಾಯತ್ ಸಭಾಂಗಣದವರೆಗೆ ಆಕರ್ಷಕ ಮೆರವಣಿಗೆ ನಡೆಸಲಾಯಿತು. ಇದರಲ್ಲಿ ಮಹಿಳೆಯರು ಮತ್ತು ಯುವತಿಯರು ಕಲಶವನ್ನು ಹೊತ್ತು ಮುಂದೆ ಸಾಗಿದರೆ ಕನಕದಾಸರ ಭಾವಚಿತ್ರವನ್ನು ಹೊತ್ತ ವಾಹನ ಹಂಬಾಲಿಸುತ್ತಿತ್ತು.

ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ದಕ್ಷಿಣ .ಕನ್ನಡ . ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಜಿಲ್ಲಾ ಪಂಚಾಯತ್  ಸಿಇಒ ಶ್ರೀವಿದ್ಯಾ, ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಹನೀಫ್, ತುಳು ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Write A Comment