ಕನ್ನಡ ವಾರ್ತೆಗಳು

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದೇಶದ ಅತ್ಯಾಧುನಿಕ ಸಿಮ್ಯುಲೇಶನ್ ಹಾಗೂ ಕೌಶಲ ಕೇಂದ್ರ ಆರಂಭ.

Pinterest LinkedIn Tumblr

Father_mullar_simulatiztion

ಮಂಗಳೂರು,ನ.26 : ಫಾದರ್ ಮುಲ್ಲರ್ ಚಾರಿಟೇಬಲ್ ನಿರ್ದೇಶಕ ರೆವರೆಂಡ್ ಫಾದರ್ ಪ್ಯಾಟ್ರಿಕ್ ರೋಡ್ರಿಗಸ್ ಅವರ ಮುಖಂಡತ್ವದಲ್ಲಿ ಅತ್ಯಾಧುನಿಕ ವೈದ್ಯಕೀಯ ಶಿಕ್ಷಣ ತರಬೇತಿಯನ್ನು ನೀಡಲು ಸಜ್ಜಾಗಿದ್ದು, ದೇಶದ ಅತ್ಯಾಧುನಿಕ ತಂತ್ರಜ್ಞಾನವೆನಿಸಿದ ಸಮಗ್ರ ಸಿಮ್ಯುಲೇಶನ್ ಹಾಗೂ ಕೌಶಲ ಕೇಂದ್ರವನ್ನು ಅಭಿವೃದ್ಧಿಪಡಿಸಿದೆ.

ಈ ಅತ್ಯಾಧುನಿಕ ತಂತ್ರಜ್ಞಾನದ ಕೇಂದ್ರವನ್ನು 4500 ಚದರ ಅಡಿ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ವಿಶ್ವದ ಸಿಮ್ಯುಲೇಶನ್ ಟೆಕ್ನಾಲಜಿ ಕ್ಷೇತ್ರದ ಅತ್ಯುನ್ನತ ಸಂಸ್ಥೆಗಳ ತರಬೇತಿದಾರರು ಕೌಶಲ ತರಬೇತಿ ನಿಡುವರು. ಸಿಎಎಫ್ ಹೆಲ್ತ್‍ಕೇರ್ ಹಾಗೂ ಇತರ ಅಗ್ರಗಣ್ಯ ಸಂಸ್ಥೆಗಳ ತಜ್ಞರು ತರಬೇತಿದಾರರಾಗಿರುತ್ತಾರೆ.

ಈ ಸೇವೆಯ ಐದು ದಿನಗಳ ತರಬೇತಿ ಕಾರ್ಯಾಗಾರವನ್ನು ಫಾದರ್ ಮುಲ್ಲರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಫಾದರ್ ರಿಚರ್ಡ್ ಕೊಹೆಲೊ ಉದ್ಘಾಟಿಸಿದರು. “ರೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಕಿಚ್ಲಿನಿಕಲ್ ಮೆಡಿಸಿನ್ ಹೆಚ್ಚು ಗಮನ ಕೇಂದ್ರೀಕರಿಸಿದ್ದು, ಈ ನಿಟ್ಟಿನಲ್ಲಿ ಮೊದಲು ವಿದ್ಯಾರ್ಥಿಗಳು ಸಿಮ್ಯುಲೇಟರ್ ಹಾಗು ಕೌಶಲ ತರಬೇತಿಯನ್ನು ಪಡೆಯಬೇಕು. ರೋಗಿಗಳಿಗೆ ಚಿಕಿತ್ಸೆ ನೀಡುವ ಮುನ್ನ ಅದರ ಬಗ್ಗೆ ಸಮಗ್ರ ತರಬೇತಿಯನ್ನು ಪಡೆಯಬೇಕು. ಇದು ಈಗಾಗಲೇ ಪಾಶ್ಚಿಮಾತ್ಯ ಜಗತ್ತಿನಲ್ಲಿ ರೂಢಿಯಾಗಿದ್ದು, ಈ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಕೇಂದ್ರ ಈಗಾಗಲೇ ಪ್ರಯತ್ನ ಆರಂಭಿಸಿದೆ ಎಂದು ವಿವರಿಸಿದರು.

ಇಂಗ್ಲೆಂಡಿನಿಂದ ಆಗಮಿಸಿದ ಅಂತಾರಾಷ್ಟ್ರೀಯ ತರಬೇತಿದಾರರಾದ ಅಮಂಡಾ ವಿಲ್ಫ್ರೆಡ್ ಅವರನ್ನು ಆಡಳಿತಾಧಿಕಾರಿ ರೆವರೆಂಡ್ ಫಾದರ್ ರುಡಾಲ್ಫ್ ರವಿ ದಾಸ್ ಸ್ವಾಗತಿಸಿದರು. ಉಪ ಆಡಳಿತಾಧಿಕಾರಿ ರೆವರಂಡ್ ಫಾದರ್ ಅಜಿತ್ ಮಿನೇಜಸ್ ಹಾಗೂ ವೈದ್ಯಕೀಯ ಮಂಡಳಿ ಸಲಹಾ ಸಮಿತಿ ಸದಸ್ಯರು ಉಪಸ್ಥಿರಿದ್ದರು.

ಸಿಮ್ಯುಲೇಶನ್ ತಂತ್ರಜ್ಞಾನವು ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಕಲಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದ್ದು, ಅತ್ಯಂತ ಸುರಕ್ಷಿತ ಮಾರ್ಗದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದನ್ನು ಅಳವಡಿಸಿಕೊಂಡ ದೇಶದ ಮೊಟ್ಟಮೊದಲ ವೈದ್ಯಕೀಯ ವಿಜ್ಞಾನ ಸಂಸ್ಥೆ ಎಂಬ ಖ್ಯಾತಿಗೆ ಫಾದರ್ ಮುಲ್ಲರ್ ಪಾತ್ರವಾಗಿದೆ ಎಂದು ಮಕ್ಯುಲಾ ಹೆಲ್ತ್ ಕೇರ್ ನ ತಾಪಾ ಭಟ್ಟಾಚಾರ್ಯ ವಿವರಿಸಿದರು.

ಈ ಕೇಂದ್ರವು ಇದೀಗ ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯಕೀಯ ಕ್ಷೇತ್ರದ ವೃತ್ತಿಪರರಿಗೆ ಕೌಶಲ ಹಾಗೂ ಸಿಮ್ಯುಲೇಶನ್ ತರಬೇತಿ ನೀಡಲಿದೆ. ವೈದ್ಯಕೀಯ, ನರ್ಸಿಂಗ್ ಹಾಗೂ ಇತರ ಸಂಬಂಧಿತ ವಿಜ್ಞಾನ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಈ ಕೇಂದ್ರವು ಸಮುದಾಯ ವಿಸ್ತರಣಾ ಚಟುವಟಿಕೆಯನ್ನೂ ಕೈಗೊಳ್ಳಲಿದೆ.

ಸಿಮ್ಯುಲೇಶನ್ ಅಂಡ್ ಸ್ಕಿಲ್ ಸೆಂಟರ್ ನ ಸಂಚಾಲಕರಾದ ಡಾ.ರಿತೀಶ್ ಡಿಕುನ್ಹಾ ಹಾಗೂ ಡಾ.ಲಾಲು ಶರೀಫ್ ಅವರು ಡೀನ್ ಡಾ.ಜಯಪ್ರಕಾಶ್ ಆಳ್ವ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು.

Write A Comment