ಕನ್ನಡ ವಾರ್ತೆಗಳು

ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

Pinterest LinkedIn Tumblr

dolphy_Squerea_photo_a

ಮಂಗಳೂರು, ನ.26: ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಬಳಸಿಕೊಂಡು ಶೋಷಣೆ ಮಾಡುತ್ತಿದ್ದ ಆರೋಪದ ಮೇಲೆ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಈತ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಬಂಧಿತ ಶಿಕ್ಷಕನನ್ನು ಚೆಂಬುಗುಡ್ಡೆ ನಿವಾಸಿ ಡಾಲ್ಫಿ ಸಿಕ್ವೇರಾ (33) ಎಂದು ಗುರುತಿಸಲಾಗಿದೆ. ಬಬ್ಬುಕಟ್ಟೆಯ ನಿತ್ಯಾಧರ್ ನಗರದ ಖಾಸಗಿ ಶಾಲೆಯಲ್ಲಿ ಸಿಕ್ವೇರಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಬುಧವಾರ ಸಂಜೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸಿಸಿಟಿವಿ ಇಲ್ಲದ ಪ್ರಾಜೆಕ್ಟ್ ರೂಂಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ. ಬುಧವಾರ ವಿದ್ಯಾರ್ಥಿಯನ್ನು ಕರೆದೊಯ್ದು ಶಿಕ್ಷಕ ಲೈಂಗಿಕವಾಗಿ ಬಳಸಿಕೊಂಡಿದ್ದ. ಈ ಬಗ್ಗೆ ಪೋಷಕರ ಬಳಿ ವಿದ್ಯಾರ್ಥಿ ಹೇಳಿಕೊಂಡಿದ್ದರು. ಪೋಷಕರು ಮತ್ತೊಬ್ಬ ವಿದ್ಯಾರ್ಥಿಯ ಹೆತ್ತವರನ್ನು ಸಂಪರ್ಕಿಸಿದಾಗ ಶಿಕ್ಷಕನ ಕೃತ್ಯ ಬಹಿರಂಗಗೊಂಡಿದೆ.

ಬಳಿಕ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಶಿಕ್ಷಕನನ್ನು ಬಂಧಿಸಲಾಗಿದೆ. ಶಿಕ್ಷಕ ವಿದ್ಯಾರ್ಥಿಯನ್ನು ಟ್ಯೂಷನ್ ನೆಪದಲ್ಲಿ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದು ತಿಳಿದುಬಂದಿದೆ. ಸತತ ಎರಡು ವರ್ಷದಿಂದ ಈತ ಈ ಕೃತ್ಯ ಎಸಗುತ್ತಿದ್ದು, ವಿದ್ಯಾರ್ಥಿಗಳು ಹೆದರಿ ಹೆತ್ತವರಿಗೆ ವಿಷಯ ತಿಳಿಸುತ್ತಿರಲಿಲ್ಲ.

Write A Comment