ಉಳ್ಳಾಲ. ನ, 26 : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಭಾಷಾ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗಾಗಿ ನಡೆಸಿದ ವಲಯ ಮಟ್ಟದ ಉರ್ದು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುವ ಸಯ್ಯಿದ್ ಮದನಿ ಉರ್ದು ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಾದ ಅನಸ್, ಸಲ್ಮಾನ್, ನಿಹಾಲ್, ಫರ್‍ಹಾನ್, ಖಲೀಲ್, ಸಕ್ಲೈನ್ ಮುಸ್ತಾಕ್, ಮೊ.ಸುಹೈಲ್, ಝಾಹಿದ್, ಶೈಫಲ್, ಆಯಿಶಾ, ರಾಫಿಯಾ, ಶಹನಾ ಶೆರಿನ್, ರೈಫಾ, ಸುಹಾನಿದಾ, ಹಫೀಝ ಇವರು ಕಿರಾಅತ್, ಚರ್ಚಾಸ್ಪರ್ಧೆ, ಏಕಪಾತ್ರ ಅಭಿನಯ, ಖವ್ವಾಲಿ, ಕನ್ನಡ ಕಂಠಪಾಠ ಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಯ ಕೆ.ಎಂ.ಕೆ.ಮಂಜನಾಡಿ ತಿಳಿಸಿದ್ದಾರೆ.
ಕನ್ನಡ ವಾರ್ತೆಗಳು
