ಕನ್ನಡ ವಾರ್ತೆಗಳು

ಕಂಪ್ಯೂಟರ್ ಸೆಂಟರ್‌ನಲ್ಲಿ ಭಿನ್ನ ಕೋಮಿನ ಯುವಜೋಡಿ ಪತ್ತೆ : ಯುವಕನಿಗೆ ಥಳಿತ : ಮರುಕಳಿಸಿದ ಅನೈತಿಕ ಪೊಲೀಸ್ ಗಿರಿ

Pinterest LinkedIn Tumblr

ಪುತ್ತೂರು, ನ.26 : ನಗರದ ಮುಖ್ಯರಸ್ತೆಯಲ್ಲಿನ ಕಂಪ್ಯೂಟರ್ ಸೆಂಟರೊಂದರಲ್ಲಿ ಕುಳಿತು ಗಂಟೆಗಟ್ಟಲೆ ಮಾತನಾಡುತ್ತಿದ್ದ ಭಿನ್ನಕೋಮುಗಳ ಯುವಜೋಡಿ ಹಿಂದು ಸಂಘಟನೆಯೊಂದರ ಕಾರ್ಯಕರ್ತರೆನ್ನಲಾದ ಕೆಲವರ ಕೈಗೆ ಸಿಕ್ಕಿ ಬಿದ್ದು ಹೊಡೆತ ತಿಂದ ಘಟನೆ ನಿನ್ನೆ ನಡೆದಿದೆ.

ನಗರದ ಕಾಲೇಜೊಂದರ ವಿದ್ಯಾರ್ಥಿಯಾಗಿರುವ ಸಂಟ್ಯಾರಿನ ಮಹಮ್ಮದ್ ಶರೀಫ್ ಕಂಪ್ಯೂಟರ್ ಸೆಂಟರ್ ನಲ್ಲಿ ವಿದ್ಯಾರ್ಥಿನಿಯಾಗಿರುವ ಯುವತಿಯೊಂದಿಗೆ ಗಂಟೆಗಟ್ಟಲೆ ಕುಳಿತು ಮಾತನಾಡುತ್ತಿದ್ದುದನ್ನು ಗಮನಿಸಿದ ಕೆಲವರು ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅನೈತಿಕ ಪೊಲೀಸರ ಗುಂಪು ಇಬ್ಬರನ್ನೂ ಹಿಗ್ಗಾಮುಗ್ಗಾ ಥಳಿಸಿದ್ದು, ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದರು.

ಪೊಲೀಸರಿಂದ ಮಾಹಿತಿ ಪಡೆದು ಠಾಣೆಗೆ ಬಂದಿದ್ದ ಯುವಕನ ತಂದೆ ಮಗನಿಗೆ ಬುದ್ಧಿವಾದ ಹೇಳಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಯುವಕ ಮತ್ತು ಯುವತಿಗೆ ಎಚ್ಚರಿಕೆ ನೀಡಿ ಕಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ..

ಠಾಣೆಯಲ್ಲಿ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.

Write A Comment