ಕನ್ನಡ ವಾರ್ತೆಗಳು

ಕೊಡಿಹಬ್ಬದಲ್ಲೊಂದು ‘ಸೆಲ್ಫಿ ಹಬ್ಬ’; ಕಾಣಿ ಸ್ಟುಡಿಯೋ ಆಯೋಜನೆಗೆ ಸೂಪರ್ ರೆಸ್ಫಾನ್ಸ್

Pinterest LinkedIn Tumblr

ಕುಂದಾಪುರ: ‘ಈ ಬಾರಿಯ ಕೊಡಿ ಹಬ್ಬದ ವಿಶೇಷ ಆಕರ್ಷಣೆಯಾಗಿ ಜನರನ್ನು ಆಕರ್ಷಿಸಿದ್ದು ‘ಸೆಲ್ಫಿ ಹಬ್ಬ’. ಕೊಡಿ ಹಬ್ಬದ ಸಂಭ್ರಮದ ಜೊತೆಗೆ ಜನರು ಸೆಲ್ಫಿ ತೆಗೆದು ಸಂಭ್ರಮಿಸಿದ್ದು ಅಲ್ಲದೇ ಆ ಸ್ಪರ್ಧೆಯಲ್ಲಿ ಪಾಲ್ಘೊಳ್ಳುವ ಮೂಲಕ ಸೆಲ್ಫಿ ಕ್ರೇಜ್ ಪ್ರದರ್ಶಿಸಿದರು.

ತಮ್ಮೂರಿನ ಹಬ್ಬಕ್ಕೆ ಏನಾದರೂ ವಿಶೇಷತೆ ಇರಲೆಂಬ ನಿಟ್ಟಿನಲ್ಲಿ ಕುಂದಾಪುರ ಮೂಲದ ಯುವಕರು ಕಲ್ಪನೆ ಹಬ್ಬದ ದಿನವಾದ ಇಂದು ಯಶಸ್ಸಿನತ್ತ ಸಾಗಿದೆ. ಕುಂದಾಪುರ ಮೂಲದ ಕಾಣಿ ಸ್ಟುಡಿಯೋ ಬೆಂಗಳೂರು ಇವರ ಆಶ್ರಯದಲ್ಲಿ ಕೋಟೇಶ್ವರ ರೋಟರ್‍ಯಾಕ್ಟ್ ಕ್ಲಬ್, ರೋಟರಿ ಕ್ಲಬ್, ಕೆನರಾ ಕಿಡ್ಸ್, ಐಶ್ವರ್ಯ ಸ್ಟುಡಿಯೋ, ರಾಮನಾಥಗೋಲಿಕಟ್ಟೆ ಫ್ರೆಂಡ್ಸ್ ಸಹ ಪ್ರಾಯೋಜಕತ್ವದಲ್ಲಿ ಜರುಗುತ್ತಿರುವ ಕೋಟೇಶ್ವರ ಕೊಡಿ ಹಬ್ಬಲೊಂದು ಸೆಲ್ಫಿ ಹಬ್ಬ ಸೆಲ್ಫಿ ಪೋಟೋಗ್ರಾಫಿ ಸ್ಪರ್ಧೆಯಲ್ಲಿ ಸಾರ್ವಜನಿಕರು ಹಬ್ಬ ಮೂಲೆ ಮೂಲೆಯಲ್ಲಿಯೋ ವಯಸ್ಸಿನ ಇತಿಮಿತಿ ಇಲ್ಲದೆ ಸೆಲ್ಫಿ ತಗೆದುಕೊಳ್ಳುತ್ತಿದ್ದ ದೃಶ್ಯ ಕಾಣುತ್ತಿತ್ತು.

Kodi_selfi fest_nov2015 (2) Kodi_selfi fest_nov2015 (6) Kodi_selfi fest_nov2015 (5) Kodi_selfi fest_nov2015 (3) Kodi_selfi fest_nov2015 (8) Kodi_selfi fest_nov2015 (7) Kodi_selfi fest_nov2015 (1) Kodi_selfi fest_nov2015 (4) Kodi_selfi fest_nov2015 (9)

ಈ ಸಲದ ಕೊಡಿ, ರಥ, ದೇವಸ್ಥಾನದ ಎದುರು, ಕೋಟಿ ತೀರ್ಥ ಸಮೀಪ ಹಾಗೂ ಮಾರಟದ ಮಳಿಗೆಗಳು ಸೇರಿದಂತೆ ಹಬ್ಬದ ಪ್ರಮುಖ ಸ್ಥಳಗಳ ಎದುರು ನಿಂತು ತಮ್ಮ ಮೊಬೈಲ್, ಟ್ಯಾಬ್, ಗೇಜೆಟ್‌ನಲ್ಲಿ ಸೆಲ್ಫಿ ಪೋಟೋ ತಗೆದುಕೊಳ್ಳತ್ತಿದ್ದ ದೃಶ್ಯ ಅಲ್ಲಲ್ಲಿ ಕಣ್ಣಿಗೆ ನೊಡಲು ಸಿಗುತ್ತಿತ್ತು. ಕೊಲ್ಲೂರು, ಬೈಂದೂರು, ಬ್ರಹ್ಮಾವರದಿಂದಲೂ ಸೆಲ್ಫಿ ಹಬ್ಬದಲ್ಲಿ ಪಾಲ್ಘೊಳ್ಳಲು ಯುವಕರು ಆಗಮಿಸಿದ್ದು ಸೆಲ್ಫಿ ಕ್ರೇಜನ್ನು ತೋರಿಸುತ್ತಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಮನಸ್ಸಿಗೆ ನೋವು ತರುವ ಕೆಲವು ವಿಚಾರ ಬರುತ್ತಿತು. ಅದನ್ನು ನಮ್ಮ ತಂಡ ಗಮನಿಸಿ ಒಂದು ಒಳ್ಳೆಯ ವಿಚಾರಕ್ಕೆ ಬಳಸಿಕೊಳುವ್ಳ ಸಣ್ಣ ಪ್ರಯತ್ನ ಮಾಡಿದ್ದೆವೆ. ಈ ಜಾಲತಾಣಗಳಿಂದ ಓಳ್ಳೆಯದು ಕೆಟ್ಟದೂ ಎಲ್ಲಾ ಇದೆ. ಜಾಲತಾಣಗಳಲ್ಲಿ ಓಳ್ಳೆಯ ವಿಚಾರಕ್ಕೂ ಯಶಸ್ಸು ಸಿಗುತ್ತದೆ ಅನ್ನುವುದಕ್ಕೆ ಈ ಸೇಲ್ಫಿ ಹಬ್ಬ ಪೋಟೋಗ್ರಾಫಿ ಚಿಕ್ಕ ನಿದರ್ಶನವಾಗಿದೆ ಎನ್ನುತ್ತಾರೆ ಕಾಣಿ ಸ್ಟುಡಿಯೋ ಮುಖ್ಯಸ್ಥ ಸಂತೋಷ ಬಳ್ಕೂರು.

ಒಟ್ಟಿನಲ್ಲಿ ಹಬ್ಬದ ಮಜಾದ ಜೊತೆಗೆ ಮೊಬೈಲ್ ಸೆಲ್ಫಿ ತೆಗೆದುಕೊಂಡು ಹಲವರು ಸಂಭ್ರಮಿಸಿದ್ದು ಮಾತ್ರ ಸುಳ್ಳಲ್ಲ.

ಗುರುವಾರ ನಾಲ್ಕು ಗಂಟೆಗೆ ಸ್ಪರ್ಧೆಯ ವಿಜೇತರ ಪಟ್ಟಿಯನ್ನು Kaani Studio ಫೇಸ್ ಬುಕ್ ಫೇಜಿನಲ್ಲಿ ಅಪ್-ಡೇಟ್ ಮಾಡಲಾಗುತ್ತದೆ. ಅಲ್ಲದೇ ಅಂದು ರಾತ್ರಿ ನಡೆಯುವ ರಾಮನಾಥಗೋಳಿ ಕಟ್ಟೆ ಫ್ರೆಂಡ್ಸ್ ಅವರ ಕಾರ್ಯಕ್ರಮದ ವೇದಿಕೆಯಲ್ಲಿ ಟಾಪ್ ಟೆನ್ ವಿಜೇತರಿಗೆ ಬಹುಮಾನವನ್ನು ಕೊಡಲಾಗುತ್ತೆ.

ವರದಿ- ಯೋಗೀಶ್ ಕುಂಭಾಸಿ

Write A Comment