ಕನ್ನಡ ವಾರ್ತೆಗಳು

ರೆಡ್ ಎಫ್ ಎಂ ನ ವಿನೂತನ ರೆಡ್ ರಥ ಅಭಿಯಾನ ಆರಂಭ .

Pinterest LinkedIn Tumblr

Red_ratha_abhuiyan_1

ಮಂಗಳೂರು,ನ.25 : ಮಂಗಳೂರಿನ ಜನಪ್ರಿಯ ರೇಡಿಯೋ ಸ್ಟೇಶನ್ ರೆಡ್ ಎಫ್ ಎಂ ನ ವಿನೂತನ ಕಾರ್ಯಕ್ರಮ ರೆಡ್ ರಥ ಆರಂಭವಾಗಿದ್ದು ಇದರ ಉದ್ಘಾಟನೆಯನ್ನು ಮಮ್ಮ ಆಗ್ರೋ ಇಂಡಸ್ಟ್ರಿ ಯಾ ವ್ಯವಸ್ಥಾಪಕಿ ಮಾಲತಿ ಲಕ್ಷ್ಮೀಶ ಅವರು ನೇರವೇರಿಸಿದ್ದರು.

ಕಾರ್ಯಕ್ರಮದಲ್ಲಿ ತುಳು ಚಿತ್ರ ನಟಿ ದಿವ್ಯಶ್ರೀ , ಡ್ರೀಮ್ಸ್ ಆನ್ ವ್ಹೀಲ್ಸ್ ಸಂಸ್ಥೆಯ ಮಾಲಿಕರಾದ ಶಿನೋಜ್ ಹಾಗೂ ತ್ರಿಬುವನ್ ಹೀರೋ ದ ಮಿಥುನ್ ಚೌಟರ ಮೊದಲಾದವರು ಮುಖ್ಯ ಅಥಿತಿಗಳಾಗಿ ಅಗಮಿಸಿದ್ದರು.

ಸತತ ಮೂರನೇ ಬಾರಿಗೆ ರೆಡ್ ಎಫ್ ಎಂ ಈ ಅಭಿಯಾನವನ್ನು ನಡೆಸುತ್ತಿದೆ , ರೇಡಿಯೋ ಸ್ಟೇಶನ್ ನ ಸ್ಟುಡಿಯೋದಲ್ಲಿ ಕುಳಿತು ಕಾರ್ಯಕ್ರಮವನ್ನು ನಡೆಸುವ ರೆಡ್ ಎಫ್ ಎಂ ನ ಆರ್ ಜೆ ಗಳು , ಈಗ ವಾಹನದಲ್ಲಿ ನಿರ್ಮಿಸಿರುವ ಸ್ಟುಡಿಯೋದ ಮಾದರಿ ರೆಡ್ ರಥ ದ ಮೂಲಕ ನೇರ ಪ್ರಸಾರದ ಕಾರ್ಯಕ್ರಮವನ್ನು ಒಂದು ವಾರಗಳ ಕಾಲ ನಡೆಸಲಿದ್ದಾರೆ , ಮಂಗಳೂರು ನಗರದ ಬೇರೆ ಬೇರೆ ಪ್ರದೇಶಗಳಿಗೆ ತೆರಳುವ ರೆಡ್ ರಥ ಅಲ್ಲಿನ ಜನರಿಗೆ ರೇಡಿಯೋ ಸ್ಟುಡಿಯೋ ಹೇಗಿರುತ್ತೆ ಅನ್ನುವ ಕುತೂಹಲವನ್ನು ತಣಿಸಲಿದ್ದಾರೆ, ಈ ಬಾರಿ ಸ್ಮಾರ್ಟ್ ಮಂಗಳೂರು ಹೇಗಿರಬೇಕು ಅನ್ನುವ ಜನರ ಕಲ್ಪನೆಯನ್ನು , ಜನಜಾಗೃತಿಯನ್ನು ಮೂಡಿಸುವ ಒಂದು ಪ್ರಯತ್ನ ರೆಡ್ ರಥದ ಮೂಲಕ ನಡೆಯಲಿದೆ,

ಮಂಗಳೂರಿನ ಜನತೆ ರೆಡ್ ರಥದ ಮೂಲಕ ಸ್ಮಾರ್ಟ್ ಸಿಟಿ ಕುರಿತಾದ ತಮ್ಮ ಅನಿಸಿಕೆಗಳನ್ನು ರೇಡಿಯೋ ಪ್ರಸಾರದಲ್ಲಿ ಹೇಳುವ ಅವಕಾಶವನ್ನು ರೆಡ್ ಎಫ್ ಎಂ ನೀಡುತ್ತಿದೆ ಎಂದು ರೆಡ್ ಎಫ್ ಎಂ ನ ಸ್ಟೇಶನ್ ಇನ್ಚಾರ್ಜ್ ಶೋಭಿತ್ ಶೆಟ್ಟಿ ಹೇಳಿದ್ದಾರೆ, ರೆಡ್ ರಥ ಸಂಚರಿಸುವ ಪ್ರದೇಶಗಳ ಮಾಹಿತಿಯನ್ನು 93.5 ರೆಡ್ ಎಫ್ ಎಂ ಮೂಲಕ ಪಡೆದುಕೊಳ್ಳಬಹುದು.

Write A Comment