ಕನ್ನಡ ವಾರ್ತೆಗಳು

ಬೈಕಂಪಾಡಿ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಅಕಸ್ಮಿಕ ಬೆಂಕಿ

Pinterest LinkedIn Tumblr

Fair_flywood_photo_1

ಮಂಗಳೂರು,ನ.25 : ನಗರದ ಬೈಕಂಪಾಡಿಯ ಎ.ಕೆ ಪ್ಲೈವುಡ್ಸ್ ಕಂಪನಿಯ ಶೆಡ್ ನಲ್ಲಿ ಮಂಗಳವಾರ ರಾತ್ರಿ ಅಕಸ್ಮಿಕ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಯಿತು.

ಪ್ಲೈವುಡ್ ತಯಾರಿಕೆಯಲ್ಲಿ ತೊಡಗಿರುವ ಕೋಸ್ಟಲ್ ಚಿಪ್ ಎಂಬ ಕಂಪನಿಗೆ ಫ್ಯಾಕ್ಟರಿ ಸೇರಿದಾಗಿದ್ದು, ಬೆಂಕಿ ಕಾಣಿಸಿಕೊಳ್ಳಲು ಸರಿಯಾದ ಕಾರಣ ಎನೆಂದು ತಿಳಿದುಬಂದಿಲ್ಲ. ಪ್ಯಾಕ್ಟರಿ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಅದೇ ಕಂಪನಿಯ ಉದ್ಯೋಗಿಗಳು ಟ್ಯಾಂಕರ್ ನಲ್ಲಿದ್ದ ನೀರನ್ನು ಉಪಯೋಗಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದರು.

Fair_flywood_photo_2 Fair_flywood_photo_3 Fair_flywood_photo_4 Fair_flywood_photo_5 Fair_flywood_photo_6 Fair_flywood_photo_7 Fair_flywood_photo_8 Fair_flywood_photo_9 Fair_flywood_photo_10

ಈ ಶೆಡ್ ನ ಪಕ್ಕದಲ್ಲೇ ಬಾಯ್ಲರ್ ಹಾಗೂ ಇನ್ನಿತರ ಘಟಕಗಳು ಇದ್ದು ಈ ಘಟಕಗಳಿಗೆ ಬೆಂಕಿ ವ್ಯಾಪಿಸಿದ್ದಲ್ಲಿ ಭಾರೀ ಅನಾಹುತವೊಂದು ಸಂಭವಿಸುವ ಸಾಧ್ಯತೆಯಿತ್ತು.

Write A Comment