ಕನ್ನಡ ವಾರ್ತೆಗಳು

ರಾಮಮಂದಿರ ನಿರ್ಮಾಣವಾದಲ್ಲಿ ಮಾತ್ರ ಸಿಂಘಾಲ್ ಆತ್ಮಕ್ಕೆ ಶಾಂತಿ: ಪೇಜಾವರ ಶ್ರೀ

Pinterest LinkedIn Tumblr

ಉಡುಪಿ: ದಿ.ಅಶೋಕ ಸಿಂಘಾಲ್ ಅವರ ಆಶಯದಂತೆ ವಿಶ್ವ ಹಿಂದೂ ಪರಿಷದ್‌ನ ದೊಡ್ಡ ಮಟ್ಟದ ಸಮಾರಂಭವನ್ನು ಉಡುಪಿಯಲ್ಲಿ ತನ್ನ ಪರ್ಯಾಯದ ಅವಧಿಯಲ್ಲಿ ನಡೆಸಿ ಕೊಡುವುದ್ದಾಗಿ ಹಾಗೂ ಅವರ ಆತ್ಮ ಶಾಂತಿ ಸಿಗಬೇಕಾದರೆ ರಾಮಮಂದಿರ ನಿರ್ಮಾಣ ಕಡೆ ಹೆಜ್ಜೆ ಇಡಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಷ ತೀರ್ಥ ಸ್ವಾಮಿಜೀ ಹೇಳಿದರು.

Udp_Ashok Singhal_Shraddhanjali (1) Udp_Ashok Singhal_Shraddhanjali (2)

ವಿಶ್ವ ಹಿಂದು ಪರಿಷದ್ ಉಡುಪಿ ಜಿಲ್ಲೆಯು ಭಾನುವಾರ ಗೋವಿಂದ ಕಲ್ಯಾಣ ಮಟಪದಲ್ಲಿ ಹಮ್ಮಿಕೊಂಡ ದಿ.ಅಶೋಕ ಸಿಂಘಾಲ್ ಜೀ ಯವರ ಭಾವ ಪೂರ್ಣ ಶ್ರದ್ಧಾಂಜಲಿ ಕಾರ್‍ಯಕ್ರಮದಲ್ಲಿ ಪುರ್ಷ್ಪಚನೆ ನಂತರ ಮಾತನಾಡಿದ ಅವರು ಹಿಂದು ಧರ್ಮದ ಹೋರಾಟಕ್ಕೆ ಹಿಂದುಗಳನ್ನು ಸಂಘಟಿಸುವ ಕಾರ್‍ಯವನ್ನು ಅಶೋಕ.ಸಿಂಘಾಲ್ ಜೀ ಮಾಡಿದ್ದಾರೆ. ರಾಮ ಜನ್ಮ ಭೂಮಿ ಚಳುವಳಿಯಲ್ಲಿ ನಾಡಿನ ಹಿಂದೂ ಜನತೆಯಲ್ಲಿ ಧರ್ಮಜಾಗ್ರತೆಯ ಹೊಸ ಶಕ್ತಿಯನು ಮೂಡಿಸುವ ಮೂಲಕ ಹಿಂದು ಬಾಂಧವರನ್ನು ಧರ್ಮ ರಕ್ಷಣೆಗಾಗಿ ಒಂದುಗೂಡಿಸಿದ ಕೀರ್ತಿ ಇವರದು.ಇವರ ನಿಧನದಿಂದ ಇಡೀ ಹಿಂದು ಸಂಘಟನೆಯ ಹೋರಾಟದ ಹಿನ್ನಡೆಗೆ ಕಾರಣವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಸುಬ್ರಮಣ್ಯ,ಆರ್.ಎಸ್.ಎಸ್ ಮುಖಂಡ ಸುಬ್ರಮಣ್ಯ ಹೊಳ್ಳ , ಆರ್.ಎಸ್.ಎಸ್ ನ ಸಹ ಸಂಚಾಲಕರಾದ ಶಂಬೂ ಶೆಟ್ಟಿ ಯವರು ಉಪಸ್ಧಿತರಿದ್ದರು.

ಕಾರ್‍ಯಕ್ರಮವನ್ನು ವಾಸುದೇವ ಭಟ್ ನಿರೂಪಿಸಿ,ವಿಶ್ವ ಹಿಂದು ಪರಿಷದ್‌ನ ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ರತ್ನಾಕರ ಅಮೀನ್ ಸ್ವಾಗತಿಸಿದ್ದರು ,ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷದ್ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಮಟ್ಟಾರು ಗಣೇಶ್ ಕಿಣಿ ವಂದಿಸಿದರು

Write A Comment