ಕನ್ನಡ ವಾರ್ತೆಗಳು

ನವತಿ ಸಂಭ್ರಮ ಆಚರಿಸಿದ ರಾಜ್ಯ ದೇವಾಡಿಗರ ಸಂಘ : ನವೀಕೃತ ಹವಾನಿಯಂತ್ರಿತ ಸೌಧ ಲೋಕರ್ಪಣೆ – ಡಾ| ಮೊಯ್ಲಿಯವರಿಗೆ ಗೌರವ ಸಮ್ಮಾನ – ಸ್ಮರಣ ಸಂಚಿಕೆ ಬಿಡುಗಡೆ

Pinterest LinkedIn Tumblr

Devadiga_navanthi_1

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು, ನ.22: ಮಂಗಳೂರಿನ ಮಣ್ಣಗುಡ್ಡೆ, ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ನವತಿ ಸಂಭ್ರಮಾಚರಣೆ (90ನೇ ವರ್ಷಾಚರಣೆ) ಹಾಗೂ ದೇವಾಡಿಗರ ಸಂಘದ ನವೀಕೃತ ಹವಾನಿಯಂತ್ರಿತ ಸಮಾಜ ಭವನದ ಉದ್ಘಾಟನಾ ಸಮಾರಂಭ ರವಿವಾರ ನೆರವೇರಿತು.

ನವತಿ ಸಂಭ್ರಮಾಚರಣೆ ಸಮಾರಂಭದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ| ವೀರೇಂದ್ರ ಹೆಗ್ಗಡೆಯವರು ನವತಿ ಸಮೃದ್ಧಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿದರು. ಬಳಿಕ ಮಾತನಾಡಿದ ಅವರು, ಡಾ| ವೀರಪ್ಪ ಮೊಯ್ಲಿಯವರು ದೇವಾಡಿಗ ಸಮಾಜದ ಅಗ್ರಗಣ್ಯ ನಾಯಕರು. ಸಮಾಜದ ಬೆಳವಣಿಗೆಯಲ್ಲಿ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ.

ಮುಖ್ಯ ಮಂತ್ರಿಯಾಗಿ ರಾಜ್ಯದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಹಲವು ಉಪಯುಕ್ತ ಕಾನೂನು ಜ್ಯಾರಿಗೆ ತಂದವರು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ದೇಶದ ಆಡಳಿತದಲ್ಲಿ ಮಾರ್ಗದರ್ಶನ ನೀಡಿ ರಾಜಕೀಯ ವಲಯದಲ್ಲಿ ಮನೆ ಮಾತಾದವರು. ಬಡಕುಟುಂಬದಿಂದ ಬಂದ ವೀರಪ್ಪ ಮೊಯ್ಲಿ ತಮ್ಮ ಜೀವನದಲ್ಲಿ ಹಂತ ಹಂತವಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಾಧನೆ ಮಾಡಿದವರು. ರಾಜಕಾರಣಿಯಾಗಿ, ಸಮಾಜ ಸೇವಕನಾಗಿ, ಸಾಹಿತಿಯಾಗಿ ದೇಶದಲ್ಲಿ ಹಲವಾರು ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು.

ಇದೀಗ ಅವರು ಬರೆದ ಮಹಾಕಾವ್ಯ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹಾನ್ ಕೃತಿಗೆ ಪ್ರತಿಷ್ಠಿತ ‘ಸರಸ್ವತಿ ಸಂಮಾನ್’ ಪ್ರಶಸ್ತಿಯು ದೊರೆತಿರುವುದು ಹೆಮ್ಮೆಯ ವಿಷಯವಾಗಿದೆ. ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಬಹುಬಲಿಯ ಮಹಾಕಾವ್ಯ ಬರೆಯುವಂತೆ ವೀರಪ್ಪ ಮೊಯ್ಲಿಯವರಿಗೆ ಹೇಳಿದ್ದರು.

ಆದರೆ ಅವರು ತಮ್ಮಲ್ಲಿ ರಾಮನನ್ನು ತುಂಬಿಕೊಂಡಿರುವುದರಿಂದಾಗಿ ಅವರು ರಾಮಾಯಣವನ್ನು ಬರೆದರು. ಆದರೆ ಇದೀಗ ಬಾಹುಬಲಿಯ ಕಾವ್ಯವನ್ನು ಬರೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಬಾಹು ಬಲಿಯು ಅತ್ಯಂತ ಎತ್ತರವಾಗಿ ಬೆಳೆದು ನಿಂತಿದ್ದಾನೆ. ಬಾಹುಬಲಿಯನ್ನು ಸಂಪೂರ್ಣವಾಗಿ ತುಂಬಿಕೊಂಡು ಬಳಿಕ ಕಾವ್ಯವನ್ನು ಆರಂಭಿಸಿ ಎಂದು ಡಾ.ವೀರೆಂದ್ರ ಹೆಗ್ಗಡೆ ಸಲಹೆ ನೀಡಿದರು

ಯಾವೂದೇ ಪದವಿಗಳು ಮುಂದೊಂದು ದಿನ ಮಾಜಿ ಯಾಗ ಬಹುದು. ಆದರೆ ಕವಿಗಳಿಗೆ, ಸಾಹಿತಿಗಳಿಗೆ ಮಾಜಿಯೆಂಬುವುದೇ ಇಲ್ಲ. ಈ ಸಾಲಿಗೆ ಸೇರಿದವರು ಡಾ.ಮೊಯ್ಲಿಯವರು ಎಂದು ಡಾ.ವೀರೆಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

Devadiga_navanthi_2 Devadiga_navanthi_3 Devadiga_navanthi_4 Devadiga_navanthi_5 Devadiga_navanthi_6 Devadiga_navanthi_7 Devadiga_navanthi_8 Devadiga_navanthi_9 Devadiga_navanthi_10 Devadiga_navanthi_11 Devadiga_navanthi_12 Devadiga_navanthi_13 Devadiga_navanthi_14 Devadiga_navanthi_15 Devadiga_navanthi_16 Devadiga_navanthi_17 Devadiga_navanthi_18 Devadiga_navanthi_19 Devadiga_navanthi_20 Devadiga_navanthi_21 Devadiga_navanthi_22 Devadiga_navanthi_23 Devadiga_navanthi_24 Devadiga_navanthi_25 Devadiga_navanthi_26 Devadiga_navanthi_27 Devadiga_navanthi_28 Devadiga_navanthi_29 Devadiga_navanthi_30 Devadiga_navanthi_31 Devadiga_navanthi_32 Devadiga_navanthi_33 Devadiga_navanthi_34 Devadiga_navanthi_35 Devadiga_navanthi_36 Devadiga_navanthi_37 Devadiga_navanthi_38 Devadiga_navanthi_39 Devadiga_navanthi_40 Devadiga_navanthi_41 Devadiga_navanthi_42 Devadiga_navanthi_43

ಸಂಘದ ನವೀಕೃತ ಹವಾನಿಯಂತ್ರಿತ ಸಮಾಜ ಭವನ ಹಾಗೂ ಮಂಗಳ ಸಾಂಸ್ಕೃತಿಕ ರಂಗ ಮಂದಿರವನ್ನು ಮಾಜಿ ಕೇಂದ್ರ ಸಚಿವ ಡಾ| ವೀರಪ್ಪ ಮೊಯ್ಲಿ ಹಾಗೂ ಶ್ರೀಮತಿ ಮಾಲತಿ ವೀರಪ್ಪ ಮೊಯ್ಲಿ ದಂಪತಿಗಳು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಡಾ| ವೀರಪ್ಪ ಮೊಯ್ಲಿಯವರು ಬರೆದ ಮಹಾಕಾವ್ಯ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹಾನ್ ಕೃತಿಗೆ ಪ್ರತಿಷ್ಠಿತ ‘ಸರಸ್ವತಿ ಸಂಮಾನ್’ ಪ್ರಶಸ್ತಿ ದೊರೆತಿರುವ ಹಿನ್ನೆಲೆಯಲ್ಲಿ ದೇವಾಡಿಗರ ಸಂಘದ ವತಿಯಿಂದ ಡಾ| ವೀರಪ್ಪ ಮೊಯ್ಲಿಯವರನ್ನು ಗೌರವ ಪೂರ್ವಕವಾಗಿ ಸಮ್ಮಾನಿಸಿ ಪುರಸ್ಕರಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಮೊಯ್ಲಿಯವರು, ನಾನು ಈ ಜಿಲ್ಲೆಯಲ್ಲಿ ಹುಟ್ಟಿದ್ದಕ್ಕೆ ಈ ಎಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು.ಪರಿವರ್ತನಾ ಮನೋಭಾವದೊಂದಿಗೆ ಪರಿಶ್ರಮ ಮತ್ತು ಚಲದಿಂದ ಹೋರಾಟ ಮಾಡಿದರೆ ಯಶಸ್ಸು ಸಾಧ್ಯ. ಜೀವನದಲ್ಲಿ ಇಚ್ಚಾಶಕ್ತಿ ಬೇಕು. ಅಧ್ಯಯನ ಶೀಲತೆ ಬೇಕು. ಪ್ರಾಮಣಿಕ ಪ್ರಯತ್ನದಿಂದ ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು.

ನಮ್ಮ ಕರ್ನಾಟಕದ ಪರಂಪರೆ ಮುಂದೆ ಜಾತಿ ಲೆಕ್ಕಕ್ಕೆ ಬರುವುದಿಲ್ಲ. ಇಂಥ ರಾಜ್ಯದಲ್ಲಿ ಹುಟ್ಟಿದಕ್ಕೆ ನನಗೆ ಹೆಮ್ಮೆಯಾಗುತ್ತದೆ. ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಬಾಹುಬಲಿ ಸ್ಪೂರ್ತಿ. ಈ ಸ್ಪೂರ್ತಿಯಿಂದಲೇ ಬಾಹುಬಲಿ ಮಹಾಕಾವ್ಯವನ್ನು ನಾನು ಆರಂಭಿಸಿದ್ದು, ಒಂದು ಹಂತದವರೆಗೆ ಕಾವ್ಯ ಬರೆದಾಗಿದೆ ಎಂದು ಡಾ.ಮೊಯ್ಲಿಯವರು ತಿಳಿಸಿದರು.

Devadiga_navanthi_44 Devadiga_navanthi_45 Devadiga_navanthi_46 Devadiga_navanthi_47 Devadiga_navanthi_48 Devadiga_navanthi_49 Devadiga_navanthi_50 Devadiga_navanthi_51 Devadiga_navanthi_52 Devadiga_navanthi_53 Devadiga_navanthi_54 Devadiga_navanthi_55 Devadiga_navanthi_56 Devadiga_navanthi_57 Devadiga_navanthi_58 Devadiga_navanthi_59 Devadiga_navanthi_60 Devadiga_navanthi_61 Devadiga_navanthi_62 Devadiga_navanthi_63 Devadiga_navanthi_64 Devadiga_navanthi_65 Devadiga_navanthi_66 Devadiga_navanthi_67 Devadiga_navanthi_68 Devadiga_navanthi_69 Devadiga_navanthi_70 Devadiga_navanthi_71 Devadiga_navanthi_72 Devadiga_navanthi_73 Devadiga_navanthi_74 Devadiga_navanthi_75

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ 90 ವರ್ಷಗಳ ಅವಲೋಕನ, ಸಂಘದ ಅಭಿವೃದ್ಧಿ ಕಾರ್ಯಕ್ರಮಗಳ ಚಿತ್ರಣ ಹಾಗೂ ಡಾ.ಎಂ. ವೀರಪ್ಪ ಮೊಯ್ಲಿಯವರಿಗೆ ಸನ್ಮಾನ್ಯ ರಾಷ್ಟ್ರಪತಿಯವರಿಂದ ಬಿರ್ಲಾ ಪೌಂಡೇಶನ್ ಪ್ರತಿಷ್ಠಿತ “ಸರಸ್ವತಿ ಸಂಮಾನ” ಪ್ರಶಸ್ತಿ ಪ್ರದಾನ ಸಂದರ್ಭದ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.

ಸಚಿವ ರಮಾನಾಥ ರೈ, ಸಂಸದ ನಳೀನ್ ಕುಮಾರ್ ಕಟೀಲ್, ಅಭಯಚಂದ್ರ ಜೈನ್, ಶಾಸಕ ಜೆ. ಆರ್. ಲೋಬೋ, ಎಂ. ಎಲ್.ಸಿ, ಐವನ್ ಡಿ’ಸೋಜಾ, ಮೇಯರ್ ಜೆಸಿಂತಾ ವಿಜಯ ಅಲ್ಫ್ರೇಡ್, ಕಾರ್ಪೊರೇಟರ್ ಜಯಂತಿ ಆಚಾರ್, ದುಬೈ ದೇವಾಡಿಗರ ಸಂಘದ ಅಧ್ಯಕ್ಷ ಹಾಗೂ ದುಬೈಯ ಖ್ಯಾತ ಉದ್ಯಮಿ ಶ್ರೀ ಹರೀಶ್ ಶೇರಿಗಾರ್, ಕುವೆಂಪು ವಿವಿ ಶಿವಮೊಗ್ಗ ಇದರ ವಿಶ್ರಾಂತ ಕುಲಪತಿ ಡಾ| ಬಿ. ಎಸ್. ಶೇರಿಗಾರ್, ನ್ಯೂರೋ ಸರ್ಜನ್ ಡಾ| ಕೆ. ವಿ. ದೇವಾಡಿಗ, ವಿಶ್ವ ತುಳು ಒಕ್ಕೂಟದ ಅಧ್ಯಕ್ಷ ಶ್ರೀ ಧರ್ಮಪಾಲ. ಯು. ದೇವಾಡಿಗ, ಮುಂಬೈ ದೇವಾಡಿಗರ ಸಂಘದ ಅಧ್ಯಕ್ಷ ವಾಸು ದೇವಾಡಿಗ ಮುಂತಾದವರು ಅತಿಥಿಗಳಾಗಿದ್ದರು.

ದೇವಾಡಿಗರ ಸಂಘದ ಅಧ್ಯಕ್ಷ ಶ್ರೀ ವಾಮನ್ ಮರೋಳಿಯವರು ಸ್ವಾಗತಿಸಿದರು. ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ಶಿವರಾಮ ಶೆಟ್ಟಿಯವರು ಡಾ| ಮೊಯ್ಲಿಯವರ ಸಾಹಿತ್ಯ ವಿಮರ್ಶೆ ಮಾಡಿದರು. ಸ್ಮರಣ ಸಂಚಿಕೆಯ ಸಂಪಾದಕರಾದ ಶ್ರೀ ಸುಭಾಶ್ಚಂದ್ರ ಕಣ್ವತೀರ್ಥರವರು ಪ್ರಸ್ತಾವನೆಗೈದರು. ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ವಿ.ಕಲ್ಯಾಣಪುರ್ ವಂದಿಸಿದರು.ವಿಜೇಶ್ ದೇವಾಡಿಗ ಹಾಗೂ ಯಶವಂತಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಉಪಾಧ್ಯಕ್ಷ ಶ್ರೀ ರತ್ನಾಕರ್ ದೇವಾಡಿಗ, ಕಾರ್ಯದರ್ಶಿ ಶ್ರೀ ಎಂ. ದೇವದಾಸ್, ಸಂಘಟನಾ ಕಾರ್ಯದರ್ಶಿ ಶ್ರೀ ಯಶವಂತ ದೇವಾಡಿಗ ಕದ್ರಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ವಿ.ಕಲ್ಯಾಣಪುರ್, ಹಾಗೂ ಯುವ ಸಂಘಟನೆಯ ಅಧ್ಯಕ್ಷ ಪ್ರಶಾಂತ್.ಯಂ.ಯಚ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

_________________________________

ದೇವಾಡಿಗ ಸಮಾಜದ ಭಾಂದವರಿಂದ ಸಾಂಸ್ಕೃತಿಕ ಕಾರ್ಯಕ್ರಮ : ಮನಸೆಳೆದ ಆಕರ್ಷಕ, ವೈವಿಧ್ಯಮಯ ನೃತ್ಯ ಪ್ರದರ್ಶನ ಹಾಗೂ…

Devadiga_navanthi_76 Devadiga_navanthi_77 Devadiga_navanthi_78Devadiga_navanthi_79 Devadiga_navanthi_80 Devadiga_navanthi_82 Devadiga_navanthi_83 Devadiga_navanthi_85 Devadiga_navanthi_86 Devadiga_navanthi_88 Devadiga_navanthi_89 Devadiga_navanthi_91 Devadiga_navanthi_93 Devadiga_navanthi_94 Devadiga_navanthi_95 Devadiga_navanthi_96 Devadiga_navanthi_98 Devadiga_navanthi_99 Devadiga_navanthi_103 Devadiga_navanthi_104 Devadiga_navanthi_105 Devadiga_navanthi_107Devadiga_navanthi_97 Devadiga_navanthi_100 Devadiga_navanthi_101 Devadiga_navanthi_102 Devadiga_navanthi_106

Devadiga_navanthi_108 Devadiga_navanthi_109

ಚಿತ್ರ : ಶುಭಂ ಸ್ಟೂಡಿಯೋ ಮಣ್ಣಗುಡ್ಡ, ಮಂಗಳೂರು

ಸಭಾಕಾರ್ಯಕ್ರಮದ ಬಳಿಕ ಸಮಾಜದ ಭಾಂದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Write A Comment