ಅಂತರಾಷ್ಟ್ರೀಯ

ಫೇಸ್ ಬುಕ್ ಪಿತಾಮಹ ಮಾರ್ಕ್ ಜುಗರ್ ಬರ್ಗ್ ಗೆ 2 ತಿಂಗಳ ಪಿತೃತ್ವ ರಜೆ

Pinterest LinkedIn Tumblr

face_book_father

ವಾಷಿಂಗ್ ಟನ್ : ಜುಕರ್ ಬರ್ಗ್ ಮತ್ತು ಪ್ರಿಸ್ಕಿಲಾ ಚಾನ್ ದಂಪತಿಗೆ ಇತ್ತೀಚೆಗಷ್ಟೇ ಹೆಣ್ಣು ಮಗು ಜನಿಸಿತ್ತು. ಈ ಹಿನ್ನಲೆಯಲ್ಲಿ ಮಾರ್ಕ್ ಜುಗರ್ ಬರ್ಗ್ ಅವರು ತಮ್ಮ ಮಗುವಿನ ಪೋಷಣೆಗಾಗಿ 2 ತಿಂಗಳ ರಜೆ ಪಡೆದಿದ್ದಾರೆ. ಆದರೆ ಈ ವಿಚಾರವನ್ನು ಫೇಸ್ ಬುಕ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿಲ್ಲವಾದರೂ, ಜುಕರ್ ಬರ್ಗ್ ರ ರಜೆ ವಿಚಾರದ ಕುರಿತು ಫೇಸ್ ಬುಕ್ ಮೂಲಗಳು ಮಾಹಿತಿ ನೀಡಿವೆ.

ಇನ್ನು ತಮ್ಮ ದೀರ್ಘಾವಧಿ ರಜೆ ಕುರಿತಂತೆ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಜುಕರ್ ಬರ್ಗ್, ಇದು ನನ್ನ ಖಾಸಗಿ ನಿರ್ಧಾರವಾಗಿದ್ದು, ಕೆಲಸದಲ್ಲಿರುವ ಪೋಷಕರು ತಮ್ಮ ಮಕ್ಕಳಿಗಾಗಿಯೇ ಸಮಯಾವಕಾಶ ಮೀಸಲಿಡಬೇಕು. ಮಕ್ಕಳ ದೃಷ್ಟಿಯಿಂದ ಮತ್ತು ಕುಟುಂಬದ ದೃಷ್ಟಯಿಂದ ಇದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಜುಕರ್ ಬರ್ಗ್ ರ ರಜೆಯ ಅವಧಿಯಲ್ಲಿ ಸಂಸ್ಥೆಯನ್ನು ಯಾರು ಮುನ್ನಡೆಸುತ್ತಾರೆ ಎಂಬ ವಿಚಾರದ ಬಗ್ಗೆಯೂ ಚರ್ಚೆಗಳು ಆರಂಭವಾಗಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಶೆರ್ಲಿ ಸ್ಯಾಂಡ್ ಬರ್ಗ್ ಅವರು ಫೇಸ್ ಬುಕ್ ಸಂಸ್ಥೆಯನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಫೇಸ್ ಬುಕ್ ಉತ್ಪನ್ನಗಳ ಉಸ್ತುವಾರಿಯನ್ನು ಮುಖ್ಯ ಉತ್ಪನ್ನ ಅಧಿಕಾರಿ ಕ್ರಿಸ್ ಕಾಕ್ಸ್ ಅವರು ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಕಾರ್ಪೋರೇಟ್ ವಲಯದಲ್ಲಿ ಸಂಸ್ಥೆಯ ಮುಖ್ಯಸ್ಥರು ಪಿತೃತ್ವ ಅಥವಾ ಮಾತೃತ್ವ ರಜೆ ಪಡೆಯುವುದು ಸಾಮಾನ್ಯವೇ ಆದರೂ ಜುಗರ್ ಬರ್ಗ್ ಅವರು ದೀರ್ಘಾವಧಿ ರಜೆ ಪಡೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ. ಈ ಹಿಂದೆ ಯಾಹೂ ಸಂಸ್ಥೆಯ ಸಿಇಒ ಮರಿಸ್ಸಾ ಮೇಯರ್ ಅವರು 2 ತಿಂಗಳ ಮಾತೃತ್ವ ರಜೆ ಪಡೆದಿದ್ದರು. ಇದರ ಬೆನ್ನಲ್ಲೇ ಯಾಹೂ ಸಂಸ್ಥೆಯ ಷೇರುಗಳ ಮೌಲ್ಯ ಕುಸಿತಕಂಡಿತ್ತು.

Write A Comment